ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿಮ್ಮ ಆರೋಗ್ಯಕ್ಕಾಗಿ ಆಯುರ್ವೇದ: 2022ರ ಆಯುರ್ ಎಕ್ಸ್‌ಪೋ ನೋಡಿದ ಹುಬ್ಬಳ್ಳಿ ಜನ ದಿಲ್‌ಖುಷ್

ಹುಬ್ಬಳ್ಳಿ: ನಮ್ಮ‌ ದೇಶದ ಮೂಲ ವೈದ್ಯ ಪದ್ಧತಿಯಾದ ಆಯುರ್ವೇದಲ್ಲಿ ವೈಜ್ಞಾನಿಕ ಚಿಕಿತ್ಸೆ ಇದೆ. ಸಾವಿರಾರು ವರ್ಷಗಳಿಂದ ಸಂಶೋಧನೆ ಮೂಲಕ ಬಂದ ಚಿಕಿತ್ಸಾ ವಿಧಾನ ಹಾಗೂ ಔಷಧಗಳು ಸಕಾಲಕ್ಕೆ ಕಾಯಿಲೆಗಳನ್ನು ನಿವಾರಿಸಬಲ್ಲವು.

ಇದೆಲ್ಲವನ್ನೂ ಜನರಿಗೆ ತಿಳಿಯಪಡಿಸಲು ಹುಬ್ಬಳ್ಳಿಯ ಗೋಕುಲ ರಸ್ತೆಯ ಬಸವೇಶ್ವರ ನಗರದ ಸಂಜೀವಿನಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಯುರ್ ಎಕ್ಸ್‌ಪೋ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆದ 2022ರ ಆಯುರ್ ಎಕ್ಸ್‌ಪೋದಲ್ಲಿ ಭಾಗವಹಿಸಿದ ಹುಬ್ಬಳ್ಳಿ-ಧಾರವಾಡದ ಜನ ಖುಷಿಯಾಗಿದ್ದಾರೆ. ಹಲವಾರು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಇರುವ ಚಿಕಿತ್ಸಾ ವಿಧಾನ, ಆಯುಷ್ ಔಷಧಿ, ಗಿಡಮೂಲಿಕೆ, ಆಹಾರ ಕ್ರಮ‌ ಇದೆಲ್ಲದರ ಬಗ್ಗೆ ಈ ಪ್ರದರ್ಶನದಲ್ಲಿ ಮಾಹಿತಿ ನೀಡಲಾಗಿದೆ.

ಇದರೊಂದಿಗೆ ಖ್ಯಾತ ಹಾಗೂ ನುರಿತ ಆಯುರ್ವೇದ ವೈದ್ಯರಿಂದ ಆರೋಗ್ಯ ಸಲಹೆ, ಆಯುರ್ವೇದ ಪುಸ್ತಕಗಳ ಪ್ರದರ್ಶನ, ಮತ್ತು ಸಿರಿಧಾನ್ಯಗಳಾದ‌ ಬಾರ್ಲಿ, ಊದಲ, ಸಜ್ಜೆ, ಸಾಂವಿ, ನವಣೆ ಮುಂತಾದವುಗಳಿಂದ ತಯಾರಿಸಲಾಗಿದ್ದ ಖಾದ್ಯ ಮಳಿಗೆಯನ್ನೂ ಇಲ್ಲಿ ತೆರೆಯಲಾಗಿತ್ತು.

ಆಯುರ್ ಎಕ್ಸ್‌ಪೋ ಎಂದರೆ ಕೇವಲ ಪ್ರದರ್ಶನವಲ್ಲ. ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು‌. ಇದರಲ್ಲಿ poster presentation, model making ಸೇರಿದಂತೆ ಆಯುರ್ವೇದ ವೈದ್ಯ ಪದ್ಧತಿಯ ಕುರಿತು ಚರ್ಚಾ ಸ್ಪರ್ಧೆಗಳನ್ನೂ ನಡೆಸಲಾಗಿದೆ. ಅನೇಕ ವಿದ್ಯಾರ್ಥಿಗಳು ಚರ್ಚೆಯಲ್ಲಿ ಉತ್ಸುಕರಾಗಿ ಪಾಲ್ಗೊಂಡಿದ್ದರು.

ಇದರಲ್ಲಿ ಇನ್ನೂ ವಿಶೇಷವೆಂದರೆ ಸಂಜೀವಿನಿ ಆಸ್ಪತ್ರೆಯ ಬಾಲರೋಗ ವಿಭಾಗದಿಂದ ಆರೋಗ್ಯವಂತ ಮಗು ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು. ನೂರಾರು ಪುಟಾಣಿಗಳು ಈ ಸ್ಪರ್ಧೆಯಲ್ಲಿ‌ ಪಾಲ್ಗೊಂಡಿದ್ದವು. 6 ತಿಂಗಳ ಒಳಗಿಮ ಮಗು ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಸಮಾಧಾನಕರ ಬಹುಮಾನ ಲಕ್ಷ್ಮಿ ವಡೆಯರ್ ಅವರ ಪುತ್ರಿಗೆ ದೊರೆತಿದೆ‌. 7 ತಿಂಗಳಿಂದ ಒಂದು ವರ್ಷದೊಳಗಿನ ಮಗು ಸ್ಪರ್ಧೆಯಲ್ಲಿ ಧೀರ್ ಎಸ್ ಪಾಟೀಲ್ ಪ್ರಥಮ ಶಿವಾಂಶ್ ಪಿ ಗೊಂಡ್ಕರ್ ದ್ವಿತೀಯ ಹಾಗೂ ಮಿಥಾಲಿ ಎಸ್ ಕಲಬುರಗಿ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ. ಅದೇ ರೀತಿ 1ರಿಂದ 2 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ವೇದಾಂಶ್ ದೇಶಪಾಂಡೆ ಪ್ರಥಮ, ವೇದಾಂತ್‌ ಬೆಂಡಿಗೇರಿ ಮತ್ತು ಅಧೀರ ಹೊಸಪೇಟ್ ದ್ವಿತೀಯ, ಹಾಗೂ ಅನ್ವಿಕಾ .ಎಸ್. ಕೇರಿ ಸಮಾಧಾನಕರ‌ ಬಹುಮಾನ ಪಡೆದುಕೊಂಡಿದ್ದಾರೆ.

ನಮ್ಮ ದೇಶದಲ್ಲೇ ಹುಟ್ಟಿ, ರಸಋಷಿಗಳ ಅಗಾಧ ಸಂಶೋಧನೆಯಿಂದ, ಪ್ರಕೃತಿದತ್ತವಾಗಿ ಬಂದ ವೈದ್ಯ ವಿಜ್ಞಾನ ಆಯುರ್ವೇದ. ಇಂಗ್ಲೀಷ್ ಔಷಧದ ಮೋಹ ಬಿಟ್ಟು ಇಡೀ ಬದುಕಿನಾದ್ಯಂತ ನಾವು ಆಯುರ್ವೇದವನ್ನೇ ಅನುಸರಿಸಿದರೆ ಸಾವನ್ನು ಮುಂದೂಡಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದರ ಸಾಕಾರಕ್ಕಾಗಿ ನಡೆದ 2022ರ ಆಯುರ್ ಎಕ್ಸ್‌ಪೋ ಹುಬ್ಬಳ್ಳಿ-ಧಾರವಾಡ ಜನರ ಸಹಭಾಗಿತ್ವದಿಂದ ಯಶಸ್ವಿಯಾಗಿದೆ. ಆಯುರ್ವೇದ ಸಮಗ್ರ ಮಾಹಿತಿ ಪಡೆದ ಜನರು ಕನಿಷ್ಟ ಒಂದು ವಾರದವಾದರೂ ಈ ಪ್ರದರ್ಶನ ನಡೆಯಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

26/04/2022 04:45 pm

Cinque Terre

49.02 K

Cinque Terre

1

ಸಂಬಂಧಿತ ಸುದ್ದಿ