ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇನ್ಮುಂದೆ ಕಿಡ್ನಿ ಕಸಿಗೆ ಬೆಂಗಳೂರಿಗೆ ಹೋಗಬೇಕಿಲ್ಲ; ನಮ್ಮದೇ ʼಕಿಮ್ಸ್‌ʼ ಇದೆಯಲ್ಲ!

: ಈರಣ್ಣ ವಾಲಿಕಾರ 'ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ: ಉತ್ತರ ಕರ್ನಾಟಕದ ʼಸಂಜೀವಿನಿʼ ಖ್ಯಾತಿಯ ಕಿಮ್ಸ್ ಆಸ್ಪತ್ರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೊಂದು ಸಿಹಿ ಸುದ್ದಿ ನೀಡಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಮುಂದಾಗಿದೆ ಕಿಮ್ಸ್ .

ಹೌದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ದೂರದ ಬೆಂಗಳೂರಿಗೆ ಹೋಗ ಬೇಕಿತ್ತು. ಈಗ ಸರ್ಕಾರ, ಕಿಮ್ಸ್ ಆಸ್ಪತ್ರೆಯಲ್ಲೇ ಕಿಡ್ನಿ ಕಸಿ ಮಾಡಲು ಪರವಾನಗಿ ನೀಡಿದೆ. ಜನರು ಇನ್ಮುಂದೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿಯೇ ಉಚಿತವಾಗಿ ಕಿಡ್ನಿ ಕಸಿ‌ ಮಾಡಿಸಿಕೊಳ್ಳಬಹುದು. ಈ‌ ಮೂಲಕ ಕಿಮ್ಸ್, ಬೆಂಗಳೂರು ಹೊರತುಪಡಿಸಿ ಕಿಡ್ನಿ ಕಸಿಗೆ ಅನುಮತಿ ಪಡೆದ ಏಕೈಕ ಸರಕಾರಿ ಆಸ್ಪತ್ರೆಯಾಗಿದೆ.

ಬಡವರು ಕಿಡ್ನಿ ಕಸಿಗೆ ಬೆಂಗಳೂರಿಗೆ ಹೋಗಿ ಲಕ್ಷಾಂತರ ರೂ‌. ಖರ್ಚು ಮಾಡಬೇಕಿತ್ತು. ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲು ಆಗದ ಸಾಕಷ್ಟು ಬಡವರು ಸಾವಿಗೀಡಾದ ಉದಾಹರಣೆಗಳಿವೆ. ಇನ್ನಾದರೂ ಬಡಜನರಿಗೆ ಈ ಸೌಲಭ್ಯ ʼವರದಾನʼವಾಗಲಿ.

Edited By :
Kshetra Samachara

Kshetra Samachara

09/03/2022 03:53 pm

Cinque Terre

26.4 K

Cinque Terre

6

ಸಂಬಂಧಿತ ಸುದ್ದಿ