ಧಾರವಾಡ: ಧಾರವಾಡದ ಎಸ್‌ಡಿಎಂ ದಂತ ಮಹಾವಿದ್ಯಾಲಯ ವತಿಯಿಂದ ಮಾ.5 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಕೃತಕ ದಂತ ವಿಭಾಗದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಐಪಿಎಸ್ ಅಧ್ಯಕ್ಷ ಡಾ. ವಿ. ರಂಗರಾಜನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 4 ರಿಂದ ಆರಂಭವಾಗಿರುವ ಕಾರ್ಯಾಗಾರ ಮೂರು ದಿನಗಳ ಕಾಲ ನಡೆಯಲಿದೆ. ದೇಶದ ವಿವಿಧ ಕಡೆಗಳಿಂದ ಆಗಮಿಸುವ ನುರಿತ ತಜ್ಞ ವೈದ್ಯರು ಮತ್ತು ಸ್ನಾತಕೋತ್ತರ ದಂತ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಅವರು ನಡೆಸಿರುವ ಹೊಸ ಸಂಶೋಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಪ್ರಾಚಾರ್ಯ ಡಾ.ಬಲರಾಮ ನಾಯ್ಕ ಮಾತನಾಡಿ, ಸಮಾವೇಶವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಅತಿಥಿಗಳಾಗಿ ಎಸ್‌ಡಿಎಂ ವಿವಿ ಕುಲಪತಿ ಡಾ.ನಿರಂಜನ್‌ಕುಮಾರ, ಐಐಟಿ ನಿರ್ದೇಶಕ ಪ್ರೊ.ಪಿ. ಶೇಷು ಆಗಮಿಸುವರು. ಈ ಕಾರ್ಯಾಗಾರವು ಪ್ರತಿ ವರ್ಷ ನಡೆಯುತ್ತದೆ. ಈ ಬಾರಿ ನಮ್ಮ ಕಾಲೇಜಿನಲ್ಲಿ ಆಯೋಜನೆ ಮಾಡಲು ಅವಕಾಶ ಸಿಕ್ಕಿದೆ. ಕೊರೊನಾ ಹಾವಳಿಯಿಂದ 2 ವರ್ಷಗಳ ಕಾಲ ಯಾವುದೇ ಕಾರ್ಯಾಗಾರ ನಡೆಸಿರಲಿಲ್ಲ. ಇದೀಗ ರಾಷ್ಟ್ರ ಮಟ್ಟದ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ ಎಂದರು.
ಡಾ. ಕೋನಾರ್ಕ ಪಾಟೀಲ, ಡಾ. ರಮೇಶ ನಾಡಿಗೇರ ಇತರರು ಉಪಸ್ಥಿತರಿದ್ದರು.
Kshetra Samachara
04/03/2022 10:57 pm