ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜರ್ಮನಿ ಇಂಟರ್ನ್ಯಾಷನಲ್ ಕಾಲೇಜ್ ಫಾರ್ ಲೈಟ್ ಮೆಡಿಸಿನ್ ಅಧ್ಯಕ್ಷರಾಗಿ ಹುಬ್ಬಳ್ಳಿಯ ಡಾ.ಯಾವಗಲ್

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಕೀರ್ತಿಯನ್ನು ಜಗದಗಲಕ್ಕೆ ಕೊಂಡೊಯ್ಯುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಭಾರತದ ಹೆಸರಾಂತ ದಂತ ಶಸ್ತ್ರಚಿಕಿತ್ಸಕ ಮತ್ತು ಓರಲ್ ಕ್ರೇನಿಯೋಫೇಶಿಯಲ್ ಲೇಸರ್ ಸ್ಪೆಷಲಿಸ್ಟ್ ಡಾ. ಚಂದ್ರಶೇಖರ ಯಾವಗಲ್ ಅವರನ್ನು ಪ್ರತಿಷ್ಠಿತ ಇಂಟರ್ನ್ಯಾಷನಲ್ ಕಾಲೇಜ್ ಫಾರ್ ಲೈಟ್ ಮೆಡಿಸಿನ್ ಮತ್ತು ಲೇಸರ್ ಥೆರಪಿ ಜರ್ಮನಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಹೌದು.. ದಂತ ಚಿಕಿತ್ಸೆ ಹಾಗೂ ಓರಲ್ ಕ್ಯಾನ್ಸರ್ ಸಂಬಂಧಿಸಿದಂತೆ ಲೇಸರ್ ಚಿಕಿತ್ಸೆ ಮೂಲಕ ಸಾಕಷ್ಟು ಹೆಸರು ಮಾಡಿರುವ ಡಾ. ಯಾವಗಲ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಈ ಸ್ಥಾನಕ್ಕೆ ನೇಮಕಗೊಂಡ ಮೊದಲ ಭಾರತೀಯರಾಗಿದ್ದಾರೆ.

ಈ ಹಿಂದೆ ಕೂಡ ವಿಶ್ವ ಆರೋಗ್ಯ ಸಂಸ್ಥೆ ಡಾ.ಚಂದ್ರಶೇಖರ ಯಾವಗಲ್ ಅವರ ಕಾರ್ಯವನ್ನು ಗುರುತಿಸಿ ಅಭಿನಂದನೆ ಸಲ್ಲಿಸಿತ್ತು. ಈಗ ಯಾವಗಲ್ ಹೆಲ್ತ್‌ಕೇರ್ ಫೌಂಡೇಶನ್‌ನ ನಿರ್ದೇಶಕರಾಗಿರುವ ಚಂದ್ರಶೇಖರ ಯಾವಗಲ್ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗೌರವವನ್ನು ಪಡೆದುಕೊಂಡು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/02/2022 11:01 am

Cinque Terre

21.02 K

Cinque Terre

1

ಸಂಬಂಧಿತ ಸುದ್ದಿ