ಕಲಘಟಗಿ:ತಾಲೂಕಿನ ಸರಕಾರಿ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಬಿ.ಸಿ.ಕರಿಗೌಡರ ಭೇಟಿ ನೀಡಿ ಆಸ್ಪತ್ರೆ ಸ್ವಚ್ಛತೆ,
ಸಿಬ್ಬಂದಿ ಹಾಜರಾತಿ ಕುರಿತು ತಾಲೂಕಾ ವೈದ್ಯಾಧಿಕಾರಿ ಗೀರಿಶ್ ಮರೆಡ್ಡಿಯವರೊಂದಿಗೆ ಚರ್ಚಿಸಿದರು.
ಸಿಬ್ಬಂದಿ ಗಳು ಸರಿಯಾಗಿ ಸಂಧರ್ಬದಲ್ಲಿ ವರ್ತಿಸಬೇಕು ಎಂದರು.ಸ್ಥಳೀಯ ಶಾಸಕ ಸಿ.ಎಂ ನಿಂಬಣ್ಣವರ ಜೊತೆ ಆಸ್ಪತ್ರೆ ಸುಧಾರಣೆ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಯುವಕರು,ಪಟ್ಟಣ ಪಂಚಾಯತ್ ಸಿಬ್ಬಂದಿ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿದರು.
ಈ ವೇಳೆ ಆಸ್ಪತ್ರೆ ಸಿಬ್ಬಂದಿ ಗಳಾದ ಡಾ.ಬಸವರಾಜ್. ಬಾಸೂರ.ಡಾ.ಕುಪಸದ.ಡಾ.ಅಂಗಡಿ. ಮಾಲತೇಶ ಕುಲಕರ್ಣಿ.ಅರುಣ ಪಾಟೀಲ.ರಾಘವೇಂದ್ರ, ತಡಸ.ಪ.ಪಂ ಸಿಬ್ಬಂದಿ ಗಳಾದ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಸಂತೋಷ ಕಟ್ಟಿಮನಿ,
ಸದಸ್ಯರಾದ ಗಂಗಾಧರ ಗೌಳಿ,ಯುವಕರಾದ ಬಸವರಾಜ್ ಹೊನ್ನಳ್ಳಿ ಇದ್ದರು.
Kshetra Samachara
12/02/2022 03:32 pm