ಕುಂದಗೋಳ : ಸರ್ಕಾರ ಕಟ್ಟಡ ಕಾರ್ಮಿಕರ ಕಲ್ಯಾಣ ಮತ್ತು ಅವರ ಆರೋಗ್ಯ ತಪಾಸಣೆಗಾಗಿ ನೀಡಿದ ಶ್ರಮಿಕ್ ಸಂಜೀವಿನಿ ಸಂಚಾರಿ ವಾಹನ ಕುಂದಗೋಳದ ಕಾರ್ಮಿಕರಿಗೆ ಉಪಯೋಗವಾಗುತ್ತಿಲ್ಲಾ.
ಹೌದು ! ಕಳೆದ ಶನಿವಾರ ಮೊದಲ ಬಾರಿಗೆ ಕುಂದಗೋಳ ಪಟ್ಟಣದ ಕಾರ್ಮಿಕರ ಆರೋಗ್ಯ ತಪಾಸಣೆಗೆಂದು ಬಂದ ಶ್ರಮಿಕ್ ಸಂಜೀವಿನಿ ಸಂಚಾರಿ ವಾಹನ ಹಾಗೂ ವೈದ್ಯರು ತಾವೂ ಬರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡದ ಕಾರಣ ಕೆಲವೇ ಕೆಲ ಕಾರ್ಮಿಕರು ಮಾತ್ರ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು.
ಈದೀಗ ಇಂದು ಮತ್ತೇ ವಾರ ಕಳೆದು ಕುಂದಗೋಳ ಪಟ್ಟಣದ ತಹಶೀಲ್ದಾರ ಕಚೇರಿ ಆವರಣಕ್ಕೆ ಕಾರ್ಮಿಕ್ ಸಂಜೀವಿನಿ ಸಂಚಾರಿ ಚಿಕಿತ್ಸಾ ವಾಹನ ಬಂದರೂ ವಿಕೇಂಡ್ ಕರ್ಫ್ಯೂ ಕಾರಣ ಆರೋಗ್ಯ ಪರೀಕ್ಷೆಗೆ ಒಬ್ಬ ಕಾರ್ಮಿಕರು ಆಗಮಿಸಿಲ್ಲಾ, ಇನ್ನೂ ವಿಚಿತ್ರ ಎಂದರೇ ತಹಶೀಲ್ದಾರ ಕಚೇರಿಗೆ ಇಂದು ರಜೆ ಇದೆ ಜನರ ಬರುವುದು ಎಲ್ಲಿಂದ ?
ಒಟ್ಟಾರೆ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸಕಲ ವೈದ್ಯಕೀಯ ಸೌಲಭ್ಯ ಮತ್ತು ನುರಿತ ವೈದ್ಯರು ಹಾಗೂ 5 ಜನ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ವಾಹನ ಬರುವಾಗ ಸ್ಥಳೀಯ ತಹಶೀಲ್ದಾರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಬಂದು ಹಳ್ಳಿ ಮತ್ತು ಪಟ್ಟಣದ ಕಾರ್ಮಿಕರ ಆರೋಗ್ಯ ಪರಿಶೀಲನೆಗೆ ಮುಂದಾಗಲಿ ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
08/01/2022 02:22 pm