ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಜಾಗರೂಕತೆ ಓಡಿಸಿದ ರಾಷ್ಟ್ರೀಯ ರೋಗದ ಬೀದಿ ನಾಟಕ ಜಾಗೃತಿ

ಕುಂದಗೋಳ: ಬೆಳೆಯುತ್ತಿರುವ ವಿಧ್ಯಮಾನದಲ್ಲಿ ರೋಗಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜನರಲ್ಲಿ ಜಾಗೃತಿ ಬದಲಾಗಿ ಅಜಾಗರೂಕತೆ ಆವರಿಸಿ ಬಿಟ್ಟಿದೆ.

ಆ ಅಜಾಗರೂಕತೆ ಹೋಗಲಾಡಿಸಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕುಂದಗೋಳ ತಾಲೂಕ ಆಸ್ಪತ್ರೆ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಗುಡಗೇರಿ ಹಾಗೂ ಕಳಸ ಗ್ರಾಮದಲ್ಲಿ ಹಾರೋಬೆಳವಡಿ ಕಲಾ ತಂಡಗಳಿಂದ ರಾಷ್ಟ್ರೀಯ ರೋಗಗಳ ಕುರಿತು ಬೀದಿ ನಾಟಕ ಏರ್ಪಡಿಸಿ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದೆ.

ಕಲಾ ತಂಡದವರು ರಾಷ್ಟ್ರೀಯ ರೋಗ ಆವರಿಸುವ ರೀತಿ, ಅದಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಸೇರಿದಂತೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಕಾಣುವ ಬಗೆ ಹಾಗೂ ಕೋವಿಡ್ ಲಸಿಕೆ ಪಡೆದ್ರೇ ಆಗುವ ಪ್ರಯೋಜನಗಳ ಕುರಿತು ಸಂಪೂರ್ಣ ಮಾಹಿತಿ ಜೊತೆ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಸ್ತ್ರೀ ಸಮಸ್ಯೆ, ಋತುಚಕ್ರದ ಸ್ವಚ್ಚತೆ ಆರೋಗ್ಯ ಕಾಳಜಿ ಬಗ್ಗೆ ಮನವರಿಕೆ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

29/12/2021 11:50 am

Cinque Terre

13.95 K

Cinque Terre

0

ಸಂಬಂಧಿತ ಸುದ್ದಿ