ಹುಬ್ಬಳ್ಳಿ : ಮಕ್ಕಳ ದಿನಾಚರಣೆಯ ಅಂಗವಾಗಿ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ಧಾರವಾಡ ಹಾಗೂ ಕೊಪ್ಪಳ ಶಾಖೆಗಳಲ್ಲಿ ಮಕ್ಕಳ ನೇತ್ರ ತಪಾಸಣೆ, ವೇಷ ಭೂಷಣ ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಿದವು.
ಧಾರವಾಡದ ಹಳಿಯಾಳ್ ರಸ್ತೆಯಲ್ಲಿನ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳಿಗೋಸ್ಕರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆಯಲ್ಲಿ ಮುದ್ದು ಮಕ್ಕಳು ತಮ್ಮ ಪಾಲಕರೊಡನೆ ಆಗಮಿಸಿ ನೇತ್ರ ತಪಾಸಣೆಯನ್ನು ಮಾಡಿಸಿಕೊಂಡು ಸೂಕ್ತ ಸಲಹೆಗಳನ್ನು ಪಡೆದರು.
ಹುಬ್ಬಳ್ಳಿಯ ಗೋಕುಲ ರೋಡ್ ಹಾಗೂ ಕೊಪ್ಪಳ ಶಾಖೆಯಲ್ಲಿ ಮಕ್ಕಳು ಉಚಿತ ತಪಾಸಣೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧಾ ಮನೋಭಾವ ಮೆರೆದರು. ನೇತ್ರ ದೇಹದ ಒಂದು ಮುಖ್ಯ ಅಂಗವಾಗಿದ್ದು ಮಕ್ಕಳು ಇತ್ತೀಚೆಗೆ ಮೊಬೈಲ್ ಹಾಗೂ ಟಿ.ವಿ ಗಿಳಿನೊಂದಿಗೆ ಕಣ್ಣುಗಳ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದು ಪಾಲಕರು ಮಕ್ಕಳ ಕಣ್ಣಿನ ಮೇಲೆ ಒಂದು ಕಣ್ಣಿಡಬೇಕಾಗಿರುವುದು ತುಂಬಾ ಮುಖ್ಯವಾಗಿದೆ ವೈದ್ಯರು ಸಲಹೆ ಮಾಡಿದರು.
ಮಕ್ಕಳ ಕಣ್ಣುಗಳನ್ನು ವರುಷದಲ್ಲಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಎಂದೂ ಹೇಳಿದರು.
Kshetra Samachara
14/11/2021 07:53 pm