ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್...
ಹುಬ್ಬಳ್ಳಿ- ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್, ಪಬ್ಲಿಕ್ ನೆಕ್ಸ್ಟ್ ವರದಿ ನೋಡಿ ಅಧಿಕಾರಿಗಳು ಲಾಕರ್ ಓಪನ್ ಮಾಡಿದ್ದಾರೆ, ಎಸ್,,, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸಿಕ್ಕ ಲಾಕರ್ ಅನ್ನು ಅಧಿಕಾರಿಗಳ ಸಮ್ಮುಖದಲ್ಲಿ ಓಪನ್ ಮಾಡಲಾಗಿದ್ದು, ಅದರಲ್ಲಿ ವಿವಿಧ ದಾಖಲೆಗಳು ದೊರೆತಿವೆ.
ಹೌದು ಚಿಟಗುಪ್ಪಿ ಆಸ್ಪತ್ರೆ ಶಿಥಿಲಾವಸ್ಥೆ ತಲುಪಿದ ಕಾರ್ಯಾಚರಣೆ ಕಟ್ಟಡದ ತೆರವು ಕಾರ್ಯಚರಣೆ ಮಾಡಲಾಗುತ್ತಿತ್ತು. ಈ ವೇಳೆ ಒಂದು ಗೋಡೆಯಲ್ಲಿ ಕಬ್ಬಿಣದ ಲಾಕರ್ ದೊರೆತ್ತಿತ್ತು. ಆಗ ಸ್ಥಳೀಯರು ಅದರಲ್ಲಿ ನಗ, ನಾಣ್ಯಗಳು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಕುತೂಹಲ ಕೆರಳಿಸಿದ ಚಿಟಗುಪ್ಪಿಯಲ್ಲಿನ ಬ್ರಿಟಿಷರ ಲಾಕರ್ ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಪ್ರಕಟಿಸಿತ್ತು, ಅದರಂತೆ ಹು-ಧಾ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಿದ್ದೇಶ್ವರ ಕಂಪನಿಯ ಲಾಕರ್ ಓಪನ್ ಮಾಡುವ ಕಾರ್ಮಿಕರು ಸತತವಾಗಿ ಒಂದೂವರೆ ಗಂಟೆಯ ನಂತರ ಲಾಕರ್ ಓಪನ್ ಮಾಡಿದ್ದಾರೆ.
ಇನ್ನು ಲಾಕರ್ ನಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಕಾಗದಗಳಿದ್ದು, ಒಂದು ನಾಣ್ಯ ಇದೆ. ಅವುಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡರು.
Kshetra Samachara
13/11/2021 10:52 am