ಹುಬ್ಬಳ್ಳಿ: ನಗರದಲ್ಲಿ ನವ ದಂಪತಿ ತಮ್ಮ ಮದುವೆ ಸಂದರ್ಭದಲ್ಲಿ ಕಣ್ಣುದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಹೌದು... ಗೋಕುಲ ರಸ್ತೆ ಚವ್ಹಾಣ ಗ್ರೀನ್ ಗಾರ್ಡ್ ನಲ್ಲಿ ಹಸೆಮಣೆ ಏರಿದ ಕಸಾಪಾ ಮಾಜಿ ಅಧ್ಯಕ್ಷ ಲಿಂಗರಾಜ ಅಂಗಡಿಯವರ ಪುತ್ರನಾದ ಸುಚೀತ್ ಮತ್ತು ರಜನಿ ಎಂಬ ನವ ದಂಪತಿ ನೇತ್ರದಾನ ಮಾಡುವ ಮೂಲಕ ಮಾನವೀಯತೆಯ ಮೆರೆದಿದ್ದಾರೆ.
ಇತ್ತೀಚಿಗೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರು ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದರು, ಅವರ ಹಾದಿಯಲ್ಲಿ ಈ ನವ ಜೋಡಿ ಮದುವೆ ಸಮಯದಲ್ಲಿ ಕಣ್ಣುದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಸಾಪ ಮಾಜಿ ಅಧ್ಯಕ್ಷ ಲಿಂಗರಾಜ ಅಂಗಡಿ ಪ್ರತಿ ದಿನ ಅನೇಕರು ಮೃತರಾಗುತ್ತರೆ. ಬಹುತೇಕರು ನೇತ್ರದಾನ ಮಾಡದೆ ಅಂತ್ಯಕ್ರಿಯೆಗೆ ಒಳಗಾಗುತ್ತಾರೆ. ಅವರೊಂದಿಗೆ ಅವರ ಕಣ್ಣುಗಳು ಮಣ್ಣು ಸೇರುತ್ತವೆ. ಅದೇ ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂಧರ ಬಾಳಿಗೆ ಬೆಳಕಾಗಲು ಸಾಧ್ಯವೆಂದು ಹೇಳಿದರು. ನಟ ಪುನೀತ್ ರಾಜಕುಮಾರ್ ನಿಧನದ ನಂತರ ಎಂ.ಎಂ.ಜೋಶಿ ಆಸ್ಪತ್ರೆಯಲ್ಲಿ ಕಣ್ಣುದಾನ ಮಾಡಲು 500 ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿದ್ದಾರೆ
Kshetra Samachara
10/11/2021 05:03 pm