ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊರೊನಾ ಲಸಿಕಾ ಜಾಗೃತಿಗಾಗಿ ಕ್ಲಾಸಿಕ್‌ನಿಂದ ನಡಿಗೆ ಜಾಥಾ

ಧಾರವಾಡ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಾಗೂ ಕೊರೊನಾ ಲಸಿಕಾ ಜಾಗೃತಿ ಅಭಿಯಾನದ ಭಾಗವಾಗಿ ನವೆಂಬರ್ 1 ರಂದು 66ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕ್ಲಾಸಿಕ್ ಸಮೂಹ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹು-ಧಾ ಮಹಾನಗರ ಪಾಲಿಕೆ ಹಾಗೂ ರಂಗಾಯಣದ ಸಹಯೋಗದಲ್ಲಿ 3 ಕಿ.ಮೀ. ನಡಿಗೆ ಜಾಥಾವನ್ನು ಬೆಳಿಗ್ಗೆ 7ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಾಸಿಕ್ ಸಮೂಹ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಉಪ್ಪಾರ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಈ ಜಾಥಾದಲ್ಲಿ ಕ್ಲಾಸಿಕ್ ಸಮೂಹ ಸಂಸ್ಥೆಗಳ ಉದ್ಯೋಗಿಗಳು, ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್, ಸ್ಪರ್ಧಾ ಸ್ಫೂರ್ತಿ ಪಬ್ಲಿಷರ್ಸ್ ಮತ್ತು ಪ್ರಿಂಟರ್ಸ್ ಪ್ರೈವೆಟ್ ಲಿಮಿಟೆಡ್, ಕ್ಲಾಸಿಕ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕ್ಲಾಸಿಕ್ ಪಿಯುಸಿ ಕಾಲೇಜಿನ ಸಿಬ್ಬಂದಿ ಭಾಗವಹಿಸಲಿದ್ದಾರೆ. ಅಲ್ಲದೆ ಪದವಿ ಕಾಲೇಜು ಹಾಗೂ ಕ್ಲಾಸಿಕ್ ಮೀಡಿಯಾ ವಿಂಗ್ ಸಿಬ್ಬಂದಿಯೊಂದಿಗೆ ಆಸಕ್ತ ಸಾರ್ವಜನಿಕರೂ ಭಾಗವಹಿಸಬಹುದು. ಈ ಜಾಥಾವು ಶ್ರೀನಗರದ ಶಿವಾಲಯ ದೇವಸ್ಥಾನದಿಂದ ಸಪ್ತಾಪುರ ಬಾವಿ ಮಾರ್ಗವಾಗಿ ಕೆಸಿಡಿ ಸರ್ಕಲ್ ಮೂಲಕ ರಂಗಾಯಣಕ್ಕೆ ಬಂದು ಕೊನೆಗೊಳ್ಳಲಿದೆ. ಕನಿಷ್ಠ ಒಂದನೇ ಡೋಸ್ ಲಸಿಕೆ ಹಾಕಿಸಿಕೊಂಡವರೂ ಪಾಲ್ಗೊಳ್ಳಬಹುದಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

27/10/2021 06:51 pm

Cinque Terre

22.81 K

Cinque Terre

0

ಸಂಬಂಧಿತ ಸುದ್ದಿ