ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಜಾನುವಾರುಗಳಿಗೆ ಕಾಲು,ಬಾಯಿ ರೋಗ

ಅಣ್ಣಿಗೇರಿ : ಪಟ್ಟಣದಲ್ಲಿ ಕೊರೊನಾ ಸೋಂಕಿನ ಭೀತಿ ಕಡಿಮೆ ಆಗುತ್ತಿದ್ದಂತೆಯೇ ಜಾನುವಾರುಗಳಿಗೆ ಕಾಲು, ಬಾಯಿ ರೋಗ ತಗುಲಿ ರೈತರನ್ನು ಸಂಕಷ್ಟಕ್ಕೆ ಒಳಪಡಿಸುತ್ತಿದೆ. ಕಾಲು, ಬಾಯಿ ರೋಗದಿಂದ ಪಟ್ಟಣದ ಹಲವಾರು ಜಾನುವಾರುಗಳಿಗೆ ಈ ರೋಗ ತಗುಲಿ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.ಸ್ಥಳೀಯ ಹೊರಕೇರಿ ಓಣಿಯ ರೈತ ಅಸಗರಸಾಬ ಅಗಸಿಬಾಗಿಲ ಎಂಬುವರಿಗೆ ಸೇರಿದ ಆಕಳು ಈ ರೋಗಕ್ಕೆ ತಗುಲಿ ಮೃತಪಟ್ಟಿದೆ. ಇದೇ ಮನೆಯಲ್ಲಿದ್ದ ಇನ್ನೊಂದು ಆಕಳಿನ ಅರೋಗ್ಯವು ಕೂಡಾ ಸುಧಾರಣೆ ಕಾಣುತ್ತಿಲ್ಲ ಎಂದು ರೈತ ಅಸಗರಸಾಬ ಅಗಸಿಬಾಗಿಲ ಅವರು ಪಶುವೈದ್ಯ ಡಾ.ಎಸ್.ಎಸ್.ಪಾಟೀಲ ಅವರಿಗೆ ಕಣ್ಣೀರು ಹಾಕುತ್ತಾ ಹೇಳಿದರು.

ಪಟ್ಟಣದಲ್ಲಿ ಸಾಕಷ್ಟು ಜಾನುವಾರುಗಳಿಗೆ ಈ ರೋಗ ತಗುಲಿ ಹಾನಿಯನ್ನು ಉಂಟುಮಾಡುತ್ತಿದೆ.ಆದ್ದರಿಂದ ರೈತ ಬಾಂಧವರು ತಮ್ಮ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ನಮ್ಮ ಆಸ್ಪತ್ರೆಗೆ ನೀಡಬೇಕು.ಜಾನುವಾರುಗಳ ಸಂಖ್ಯೆಯನ್ನು ಆಧರಿಸಿ ಕೂಡಲೇ ಲಸಿಕೆಯನ್ನು ನೀಡಲಾಗುವುದು ಎಂದು ಪಶುವೈದ್ಯ ಡಾ. ಎಸ್. ಎಸ್ ಪಾಟೀಲ್ ರೈತರಿಗೆ ತಿಳಿಸಿದರು. ಮೃತಪಟ್ಟ ಆಕಳಿನ ಮಾಹಿತಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಪಶುವೈದ್ಯ ಡಾ. ಎಸ್. ಎಸ್. ಪಾಟೀಲ್ ರೈತರಿಗೆ ಭರವಸೆ ನೀಡಿದರು .

Edited By : Shivu K
Kshetra Samachara

Kshetra Samachara

26/10/2021 08:46 am

Cinque Terre

43.39 K

Cinque Terre

0

ಸಂಬಂಧಿತ ಸುದ್ದಿ