ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬನ್ನಿ ಒಗ್ಗಟ್ಟಿನಿಂದ ಹೋರಾಡಿ ಮಾನಸಿಕ ವ್ಯಾಧಿಯನ್ನು ಹೊಡೆದೋಡಿಸೋಣ

ಧಾರವಾಡ: ಕಾರಣವಿಲ್ಲದೇ ಕೆಲವೊಂದು ಸಲ ಕೆಲವೊಬ್ಬರಿಗೆ ಮಾನಸಿಕ ವ್ಯಾಧಿ ಬಂದು ಆವರಿಸಿಕೊಳ್ಳಬಹುದು. ಮಾನಸಿಕ ಕಾಯಿಲೆ ಯಾರನ್ನಾದರೂ ಯಾವಾಗ ಬೇಕಾದರೂ ಬಂದು ಕಾಡಬಹುದು. ಹೀಗಾಗಿ ಮಾನಸಿಕ ರೋಗವನ್ನು ಹೊಡೆದೋಡಿಸಲು ಸರ್ಕಾರಗಳು ಕಂಕಣ ಬದ್ಧವಾಗಿ ನಿಂತಿವೆ. ಹೀಗಾಗಿಯೇ ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವೆಂದು ಆಚರಿಸಲಾಗುತ್ತಿದೆ. ಈ ವರ್ಷ ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಾನಸಿಕ ಆರೋಗ್ಯ ವಿಭಾಗವು ಅಸಮಾನತೆಯ ಜಗತ್ತಿನಲ್ಲಿ ಮನೋಸ್ವಾಸ್ಥ್ಯ ಎಂಬ ಘೋಷವಾಕ್ಯದಡಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದೆ.

ಒಬ್ಬರೇ ಕುಳಿತು ಮಾತನಾಡುವುದು, ಖಿನ್ನತೆ, ಆತಂಕ, ಸದಾ ಬೇಜಾರು ನಿರಾಸಕ್ತಿ, ನಿಶ್ಯಕ್ತಿ, ವಿಚಿತ್ರ ರೀತಿಯಲ್ಲಿ ವರ್ತನೆ, ಕಾರಣವಿಲ್ಲದೇ ಭಯಬೀಳುವುದು ಹಾಗೂ ಆತ್ಮಹತ್ಯೆ ಆಲೋಚನೆ ಮಾಡುವುದು ಇವು ಮಾನಸಿಕ ಕಾಯಿಲೆಯ ಮುಖ್ಯ ಲಕ್ಷಣಗಳು. ಮಾನಸಿಕ ಕಾಯಿಲೆಯಿಂದ ಕುಟುಂಬದಲ್ಲಿ ತೊಡಕುಗಳು ಉಂಟಾಗಬಹುದು ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ಕೊಡಿಸಿದರೆ ಮಾನಸಿಕ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ.

ಹಾಗಾದರೆ ಬನ್ನಿ ಎಲ್ಲರಿಗೂ ಮಾನಸಿಕ ಆರೋಗ್ಯದ ಅರಿವು ಮೂಡಿಸಿ ಚಿಕಿತ್ಸೆಯ ಲಾಭವನ್ನು ಒದಗಿಸುವಲ್ಲಿ ನಾವೆಲ್ಲರೂ ಕೂಡಿ ಶ್ರಮಿಸೋಣ.

ಪ್ರಕಟಣೆ: ಧಾರವಾಡ ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ

ಮಾನಸಿಕ ಅರೋಗ್ಯ ವಿಭಾಗ ಧಾರವಾಡ.

Edited By :
Kshetra Samachara

Kshetra Samachara

10/10/2021 03:11 pm

Cinque Terre

47.54 K

Cinque Terre

0

ಸಂಬಂಧಿತ ಸುದ್ದಿ