ಹುಬ್ಬಳ್ಳಿ : ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಭಾನುವಾರ ದಿ. 10 ರಂದು ನಗರದ ಸ್ಟೇಶನ್ ರಸ್ತೆಯಲ್ಲಿರುವ ಹೆಡ್ ಪೋಸ್ಟ್ ಆಫೀಸ್ ದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಉತ್ತರ ಕರ್ನಾಟದ ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಡಾ.ವಿನೋದ ಕುಮಾರ್ ಮುಂಜಾನೆ 9 ಕ್ಕೆ ಶಿಬಿರ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ , ಗೌರವ ಅತಿಥಿಗಳಾಗಿ ಡಾ. ಈಶ್ವರ್ ಹೊಸಮನಿ, ಡಾ, ಸುಭಾಶ್ ಬಬ್ರುವಾಡ್, ಡಾ. ಕವಿತಾ ಏವೂರ್ ಪಾಲ್ಗೊಳ್ಳಲಿದ್ದಾರೆ. ಧಾರವಾಡ ವಿಭಾಗದ ಪೋಸ್ಟ್ ಆಫೀಸ್ ಹಿರಿಯ ಅಧೀಕ್ಷಕರು ಹಾಗೂ ಸಿಬ್ಬಂದಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.
Kshetra Samachara
09/10/2021 01:03 pm