ಹುಬ್ಬಳ್ಳಿ: ಕೊರೋನಾದಂತಹ ಕಷ್ಟಕಾಲದಲ್ಲಿ ಕಾರ್ಯ ನಿರ್ವಹಿಸಿ, ತಮ್ಮ ಜೀವವನ್ನು ಲೆಕ್ಕಿಸದೆ ಜನರ ಜೀವವನ್ನು ಉಳಿಸುವ ಕಾರ್ಯ ಮಾಡಿದ್ದ ಕೊರೋನಾ ವಾರಿಯರ್ಸ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತಿದ್ದಾರೆ. ಹಲವು ದಿನಗಳಿಂದ ಸಹಿಸಿಕೊಂಡು ಬಂದಿದ್ದ ಕಿರುಕುಳದ ಕಟ್ಟೆ ಒಡೆದಿದ್ದು ಇದೀಗ ಪ್ರಾಣವನ್ನೇ ಬಿಡುವ ಆಲೋಚನೆಗೆ ಈ ವಾರಿಯರ್ಸ್ ಬಂದಿದ್ದಾರೆ...
ಹೀಗೆ ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ತಮಗಾಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಸ್ಟಾಪ್ ನರ್ಸ್. ಮತ್ತೊಂದೆಡೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪ್ರಾಥಮಿಕ ಆರೋಗ್ಯ ಇಲಾಖೆಯ ಹಿರಿಯ ಸಹಾಯಕ ಸಿಬ್ಬಂದಿ. ಹೌದು ಹುಬ್ಬಳ್ಳಿಯ ಕಿಮ್ಸ್ ಎದುರು ಹೀಗೆ ಇವರೆಲ್ಲ ಧ್ವನಿ ಎತ್ತುತ್ತಿರೋದು ಕಿರುಕುಳದ ವಿರುದ್ಧ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರಂತರ ವಾಗಿ ಕಿರುಕುಳದ್ದೇ ಕಾರುಬಾರು.. PHC ಯಲ್ಲಿರುವ ಆರೋಗ್ಯ ವೈದ್ಯಾಧಿಕಾರಿ ಗೀತಾ ನಾಯಕ ಎನ್ನುವ ಅಧಿಕಾರಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ಬೇಸತ್ತಿದ್ದ ಹಿರಿಯ ಸಹಾಯಕ ಸಿಬ್ಬಂದಿ ಮೆಹಬೂಬ್ ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರತಿಯೊಂದು ವಿಷಯಕ್ಕೂ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆಂದು ತಮ್ಮ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದು ನನ್ನ ಸಾವಿಗೆ ಗೀತಾ ಕಾರಣ ಅಂತ ಬರೆದು ವಿಷ ಸೇವಿಸಿದ್ದಾರೆ..
ಕಳೆದ ವರ್ಷದಿಂದ ಇದೆ ರೀತಿ ಎಲ್ಲರಿಗೂ ಕಿರುಕುಳ ನೀಡುತ್ತಿದ್ದು, ಕುಂತರೂ ನಿಂತರೂ ಪ್ರಶ್ನೆಗಳನ್ನು ಕೇಳುವ ಮೂಲಕ ಮಾನಸಿಕವಾಗಿ ಸಹಾಯಕ ಸಿಬ್ಬಂದಿಯನ್ನು ಕಿರುಕುಳ ನೀಡಲಾಗುತ್ತಿದೆ ಅಂತ ಸಹಾಯಕ ಸಿಬ್ಬಂದಿ ಆರೋಪ ಮಾಡಿದ್ದಾರೆ. ಈಗಾಗಲೇ ಕಿರುಕುಳದ ಬಗ್ಗೆ ಹಲವು ಬಾರಿ ಡಿಹೆಚ್ಓ ಗೆ ಮನವಿ ಮಾಡಿದ್ದರು ಸಹ ಪ್ರಯೋಜನವಾಗಿಲ್ಲ. ಕಳೆದ ವಾರದಲ್ಲೇ ಇದು ಎರಡನೇ ಆತ್ಮಹತ್ಯೆಗೆ ಯತ್ನದ ಕೇಸ್ ಆಗಿದ್ದು, ಕಿರುಕುಳ ನಿಲ್ಲದೆ ಹೋದರೆ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅನ್ನೋ ಮಾತಿನ ಮೂಲಕ ಸಹಾಯಕ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ..
ಜನರ ಆರೋಗ್ಯದ ಬಗ್ಗೆ ನಿತ್ಯ ಕಾಳಜಿ ವಹಿಸುವ ಆರೋಗ್ಯ ಸಿಬ್ಬಂದಿಗೆ ಹೀಗಾದ್ರೆ ಜನರನ್ನು ನೋಡೋರು ಯಾರು ಅನ್ನೋ ಪ್ರಶ್ನೆ ಎದುರಾಗುತ್ತೆ. ಹಲವು ವರ್ಷಗಳಿಂದ ಅಧಿಕಾರಿಗಳ ದಬ್ಬಾಳಿಕೆ ಇದ್ದೆ ಇದ್ದು ಅದನ್ನ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ...!
Kshetra Samachara
21/09/2021 01:32 pm