ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕಂದು ರೋಗ ತಡೆಗೆ ಕರುಗಳಿಗೆ ಲಸಿಕೆ

ಕಲಘಟಗಿ: ತಾಲೂಕಿನ ಬೆಲವಂತರ ಗ್ರಾಮದಲ್ಲಿ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕಂದು ರೋಗ ನಿಯಂತ್ರಣ ಕಾರ್ಯಕ್ರಮ ಅಂಗವಾಗಿ 4 ರಿಂದ 8 ತಿಂಗಳ ಹೆಣ್ಣು ಕರುಗಳಿಗೆ ಕಂದು ರೋಗದ ಲಸಿಕೆ ಹಾಕಲಾಯಿತು.

ತಾಲೂಕಾ ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ. ಎಸ್.ವಿ ಸಂತಿ ಮಾತನಾಡಿ,ಕಂದು ರೋಗವು ಪ್ರಾಣಿಗಳಿಂದ ಮನುಷ್ಯರಿಗೂ ಹರಡುವ ರೋಗವಾಗಿದ್ದು,ಇದರ ನಿರ್ಮೂಲನೆಗಾಗಿ 4 ರಿಂದ 8 ತಿಂಗಳ ಕರುವಿಗೆ ಒಂದು ಬಾರಿ ಲಸಿಕೆ ನೀಡಿದರೆ ಈ ರೋಗ ಬರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಉಪ ನಿರ್ದೇಶಕ ಡಾ.ಉಮ್ಮೆಶ ಕೊಂಡಿ, ಮುಕ್ಕಲ ಪಶುವೈದ್ಯಾಧಿಕಾರಿ ಸುರೇಶ ಗೊಂಡೆ ಹಾಗೂ ರೈತರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

20/09/2021 09:30 pm

Cinque Terre

29.67 K

Cinque Terre

0

ಸಂಬಂಧಿತ ಸುದ್ದಿ