ಹುಬ್ಬಳ್ಳಿ: ಬೃಹತ್ ಕೋವಿಡ್ ಲಸಿಕಾಕರಣ ಅಭಿಯಾನದಲ್ಲಿ ಜಿಲ್ಲೆಯಲ್ಲಿ 85 ಸಾವಿರ ಕೋವಿಡ್ ಲಸಿಕೆ ನೀಡಿವ ಗುರಿ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಜನಸಾಗರವೇ ಹರಿದು ಬರುತ್ತಿದೆ.
ಬೆಳಿಗ್ಗೆಯಷ್ಟೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಚಾಲನೆ ನೀಡಿದ್ದು, ಬೃಹತ್ ಲಸಿಕೆ ಅಭಿಯಾಕ್ಕೆ ಅಗತ್ಯ ಇರುವ ಲಸಿಕೆಗಳು ನಿನ್ನಯೇ ಜಿಲ್ಲಾಡಳಿತದ ಕೈ ಸೇರಿವೆ. 420ಕ್ಕೂ ಹೆಚ್ಚು ಲಸಿಕಾ ತಂಡಗಳನ್ನು ರಚಿಸಿಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಕಳುಹಿಸಿಕೊಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಕೋವೀಡ್ ಲಸಿಕಾ ಕೇಂದ್ರಗಳು ಇಲ್ಲದ ಗ್ರಾಮಗಳಿಗೆ ಕಿಮ್ಸ್ ಆಸ್ಪತ್ರೆಯಿಂದ 150 ಲಸಿಕಾ ತಂಡಗಳನ್ನು ರಚಿಸಿ ಲಸಿಕೆ ನೀಡಲು ಕಳಹಿಸಿಕೊಡಲಾಗಿದೆ. ಕೈಗಾರಿಕೆ ವಸಹಾತು ಸೇರಿದಂತೆ ಬೃಹತ್ ಕೈಗಾರಿಕೋದ್ಯಮಗಳು, ಸ್ಲಂಗಳು, ಸಮುದಾಯ ಭವನಗಳಲ್ಲಿ ಕೂಡ ಲಸಿಕಾಕರಣ ಕೈಗೊಳ್ಳಲಾಗುತ್ತಿದೆ.
ಗ್ರಾಮಗಳ ಶಾಲೆ ಹಾಗೂ ದೇವಸ್ಥಾನಗಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್ ತಗೆದುಕೊಂಡು ಬಂದು ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಜೂನ್ 26 ಕ್ಕೂ ಮೊದಲು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದವರು, 28 ದಿನಗಳ ಅವಧಿ ಪೂರ್ಣಗೊಂಡ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು ಇಂದು ಎರಡನೇ ಡೋಸ್ ಪಡೆದುಕೊಳ್ಳಬಹುದಾಗಿದೆ. 90 ಸಾವಿರಕ್ಕೂ ಅಧಿಕ ಲಸಿಕೆ ಲಭ್ಯ ಇವೆ.
ಇನ್ನೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಪತ್ರಿ ದಿನ 10 ಸಾವಿರಕ್ಕೂ ಅಧಿಕ ಲಸಿಕೆ ನೀಡಲಾಗುತ್ತಿದೆ. ಅಭಿಯಾನದ ನಂತರವೂ ಪತ್ರಿ ದಿನ 10 ಸಾವಿರ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Kshetra Samachara
17/09/2021 11:54 am