ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲವು ವರ್ಷಗಳಿಂದ ಮಕ್ಕಳ ವೈದ್ಯರಿಲ್ಲದೆ ತಾಲೂಕಿನ ಜನತೆ ಮಕ್ಕಳ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಹೌದು.. ಲಕ್ಷ್ಮೇಶ್ವರ ಪಟ್ಟಣ ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ ತಾಲೂಕಿನ 38 ಗ್ರಾಮಗಳ ಜನರಷ್ಟೇ ಅಲ್ಲದೆ ಬೇರೆಯ ಸವಣೂರು, ಶಿಗ್ಗಾಂವ, ಶಿರಹಟ್ಟಿ ತಾಲೂಕಿನ ಜನತೆಗೆ ಈ ಸಮುದಾಯ ಆರೋಗ್ಯ ಕೇಂದ್ರವೂ ವರವಾಗಿದೆ. ಆದರೆ ಈ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವೈದ್ಯರಿಲ್ಲದೇ ಸುತ್ತಮುತ್ತಲಿನ ಗ್ರಾಮದ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನಲ್ಲಿ ಶಿಗ್ಲಿ, ಸೂರಣಗಿ ಪ್ರವೃತ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ವೈದ್ಯರ ಕೊರತೆಯಿದೆ ನಿತ್ಯ ಸರಕಾರಿ ಆಸ್ಪತ್ರೆಗೆ 300 ಹೆಚ್ಚು ಹೊರ ರೋಗಿಗಳಲ್ಲಿ ಶೇ 30ರಷ್ಟು ಮಕ್ಕಳಿರುತ್ತಾರೆ. ಕೋವಿಡ್ ಮೂರನೇ ಎಲೆ ಮಕ್ಕಳಿಗೆ ಹೆಚ್ಚು ಅಪಾಯ ಎಂಬ ಭೀತಿಯಲ್ಲಿ ಇರುವ ಪಾಲಕರಿಗೆ ಮಕ್ಕಳು ಕಾಯಿಲೆಗಳು ಆಗುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ
ಲಕ್ಷ್ಮೇಶ್ವರ ವ್ಯಾಪ್ತಿಯ 18 ವರ್ಷ ವಯೋಮಿತಿಯ 15097 ಮಕ್ಕಳು ಶಿಗ್ಲಿ ಪ್ರಾಥಮಿಕ ಕೇಂದ್ರದಲ್ಲಿ ವ್ಯಾಪ್ತಿಯ 3938 ಮಕ್ಕಳು ಬಾಲೇಹೊಸೂರು ಕೇಂದ್ರದಲ್ಲಿ 5042 ಯಳವತ್ತಿಯಲ್ಲಿ 5050 ಸೂರಣಗಿಯಲ್ಲಿ 4114 ಸೇರಿ ಒಟ್ಟು 33531 ಮಕ್ಕಳಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ವರವಾಗಬೇಕಿದ್ದ ಪಟ್ಟಣದ ಆರೋಗ್ಯ ಕೇಂದ್ರದಲ್ಲಿ ಚಿಕ್ಕಮಕ್ಕಳ ವೈದ್ಯರೇ ಇಲ್ಲದಿರುವುದು ಬೇಸರದ ಸಂಗತಿ ಆದರಿಂದ ಸಂಬಂಧಿಸಿದ ಅಧಿಕಾರಿಗಳು ಆದಷ್ಟೂ ಬೇಗ ಚಿಕ್ಕಮಕ್ಕಳ ವೈದ್ಯರನ್ನು ನೇಮಕ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
Kshetra Samachara
04/09/2021 05:46 pm