ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವಿರುದ್ಧ ಶತಾಯು ಗತಾಯು ಹೋರಾಟ ನಡೆಸುತ್ತಿರುವ ಕಿಮ್ಸ್ ಆಸ್ಪತ್ರೆ ಉತ್ತರ ಕರ್ನಾಟಕದ ಜನರ ಜೀವನಾಡಿಯಾಗಿದೆ. ಉತ್ತಮ ಚಿಕಿತ್ಸೆ ನೀಡುವ ಮೂಲಕ ಹೆಸರಾಗಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಈಗ ಹೈಟೆಕ್ ಚಿಕಿತ್ಸೆಯೊಂದಿಗೆ ಗುಣಮಟ್ಟದ ಆಹಾರ ನೀಡುವ ಮೂಲಕ ಜನಮನ್ನಣೆ ಪಡೆಯಲು ಮುಂದಾಗಿದೆ.
ಹೌದು.. ಕಿಮ್ಸ್‌ನ ( ಕರ್ನಾಟಕ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೋಗಿಗಳಿಗೆ ನಾನಾ ಬಗೆಯ ಉಪಾಹಾರ ಮತ್ತು ಊಟದ ವ್ಯವಸ್ಥೆ ಜಾರಿಗೊಳಿಸಿದ್ದು , ರೋಗಿಗಳಲ್ಲಿ ಸಂತಸ ಮೂಡಿಸಿದೆ. ಹೊಸ ವ್ಯವಸ್ಥೆ ಜಾರಿಯಾಗಿದೆ. ರೋಗಿಗಳಿಗೆ ಗುಣಮಟ್ಟ ಆಹಾರ ನೀಡಲು ಮುಂದಾಗಿರುವ ಕಿಮ್ಸ್ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೋಗ್ಯಯುತ ಆಹಾರವನ್ನು ನೀಡಲು ಸಿದ್ಧವಾಗಿದೆ.ಇನ್ನೂ ಆಹಾರ ಪೂರೈಕೆ ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಬದಲಾದ ವ್ಯವಸ್ಥೆಯಿಂದ ಕಿಮ್ಸ್‌ನಲ್ಲಿ ಆಹಾರ ಪೂರೈಕೆಯಲ್ಲಿನ ಸೋರಿಕೆ,ಅಕ್ರಮ,ಅವ್ಯವಹಾರ ಸ್ವಲ್ಪ ಕಡಿವಾಣ ಹಾಕಿದಂತಾಗಿದೆ.
ಆಹಾರ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಲಾಗಿದ್ದು,ಆದರೆ ಹೊಸ ವ್ಯವಸ್ಥೆಯಲ್ಲಿ ರೋಗಿಗಳಿಗೆ ರುಚಿಕರ ಊಟ ಸರಬರಾಜು ಆಗುವಂತೆ ನೋಡಿಕೊಳ್ಳುವ ಹೆಚ್ಚಿನ ಹೊಣೆ ಕಿಮ್ಸ್ ಮೇಲೆ ಬಿದ್ದಂತಾಗಿದೆ.ಕಿಮ್ಸ್ ನಾನಾ ವಿಭಾಗಗಳಲ್ಲಿ ಸರಾಸರಿ 1300-1500 ಜನರು ಒಳ ರೋಗಿಗಳು ಚಿಕಿತೆ ಪಡೆಯುತ್ತಿದ್ದಾರೆ. ಇಷ್ಟೆಲ್ಲ ರೋಗಿಗಳಿಗೆ ಅವರ ಚಿಕಿತ್ಸೆಗೆ ಅನುಗುಣವಾಗಿ ಊಟ ಪೂರೈಸುವ ಜವಾಬ್ದಾರಿಯನ್ನು ಕಿಮ್ಸ್ ಆಡಳಿತ ಮಂಡಳಿ ಹೊತ್ತುಕೊಂಡಿದೆ.ಅಪೌಷ್ಟಿಕ ಮಕ್ಕಳು,ಎಂಐಸಿಯುನಲ್ಲಿ ಚಿಕಿತ್ಸೆ ಪಡೆಯುವವರಿಗೆ, ಗರ್ಭಿಣಿಯರು,ಟಿಬಿ,ಸುಟ್ಟಗಾಯಗಳಾದ ರೋಗಿಗಳಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡಲಾಗುತ್ತದೆ.
ಪ್ರತಿದಿನ ಪ್ರತಿಯೊಬ್ಬ ರೋಗಿಗೆ 68 ರೂ.ಗಳಂತೆ ಆಹಾರ ಪೂರೈಕೆ ಜವಾಬ್ದಾರಿಯನ್ನು ಗುತ್ತಿಗೆಗೆ ವಹಿಸಲಾಗಿದೆ . ಅಡುಗೆ ಮನೆ ಹೊರತುಪಡಿಸಿ ಪ್ರತಿ ಅಡುಗೆ ಪರಿಕರಗಳನ್ನು ಗುತ್ತಿಗೆಯವರೇ ನೋಡಿಕೊಳ್ಳಲಿದ್ದಾರೆ . ಸ್ವಚ್ಛತೆ ಕಾಯ್ದುಕೊಳ್ಳುವುದರ ಜೊತೆಗೆ ಶುದ್ಧ ಮತ್ತು ರುಚಿಕರ ಆಹಾರ ಪೂರೈಸುವ ಹೊಣೆ ನೀಡಲಾಗಿದೆ. ಒಟ್ಟಿನಲ್ಲಿ ಇಷ್ಟುದಿನ ಚಿಕಿತ್ಸೆ ಮಾತ್ರ ನೀಡುತ್ತಿದ್ದ ಕಿಮ್ಸ್ ಈಗ ರೋಗಿಗಳಿಗೆ ಉಟೋಪಚಾರ ನೀಡಲು ಮುಂದಾಗಿರುವುದು ವಿಶೇಷವಾಗಿದೆ.
Kshetra Samachara
31/07/2021 06:35 pm