ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಯಶಸ್ವಿ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದ ಕಿಮ್ಸ್ ನಲ್ಲಿ ಪ್ಲಾಸ್ಮಾ ಚಿಕಿತ್ಸೆ ಸ್ಥಗಿತ...!

ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲು ಪ್ಲಾಸ್ಮಾ ಥೆರಪಿ ನಡೆಸಿ ಯಶಸ್ವಿಯಾಗಿದ್ದ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ತಂಡ, ಸುಮಾರು 108 ಜನರಿಗೆ ಪ್ಲಾಸ್ಮಾ ಥೆರಪಿ ಮಾಡಿದ್ದಾರೆ. ಪ್ಲಾಸ್ಮಾ ಥೆರಫಿಗೆ ಒಳಪಟ್ಟಿದ್ದರೂ ಕೆಲವರಿಗೆ ಬಹು ಕಾಯಿಲೆಗಳು ಇದ್ದುದರಿಂದ ಯಶಸ್ವಿಯಾಗದೆ ಮೃತಪಟ್ಟಿದ್ದಾರೆ. ಆದರೂ ಪ್ಲಾಸ್ಮಾ ಥೆರಪಿ ನಡೆಸಿ ರಾಜ್ಯದಲ್ಲಿಯೇ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಿಮ್ಸ್ ನಲ್ಲಿ, ಇದೀಗ ತೀವ್ರ ಉಸಿರಾಟದ ಸಮಸ್ಯೆ ಇರುವ ಕೋರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸುತ್ತಿಲ್ಲ. ಅಲ್ಲದೆ ಕೋರೊನಾ ಎರಡನೇ ಅಲೆ ಬರಲಿದೆ ಎಂಬ ಆತಂಕದಲ್ಲಿದ್ದ ಜನರಿಗೆ ಕೊಂಚ ನಿರಾಳವಾಗಿದೆ. ಚಳಿ ಅಧಿಕವಾಗಿದ್ದರೂ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಸಧ್ಯ ಸ್ಥಗಿತಗೊಳಿಸಲಾಗಿದೆ.

ಪ್ರಮುಖವಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ನಿಂದ ಒಪ್ಪಿಗೆ ಪಡೆದು ಕಿಮ್ಸ್ ನಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಅಲ್ಲದೆ ಪ್ಲಾಸ್ಮಾ ದಾನಿಗಳಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ಪ್ರಕಟಿಸಿತ್ತು. ಇದರ ಪರಿಣಾಮವಾಗಿ 60ಕ್ಕೂ ಹೆಚ್ಚು ಜನರು ಪ್ಲಾಸ್ಮಾ ದಾನ ಮಾಡಿದ್ದಲ್ಲದೇ ಕೆಲವು ವೈದ್ಯರೂ ಸಹ ಮುಂದೆ ಬಂದು ಪ್ಲಾಸ್ಮಾ ದಾನ ಮಾಡಿದ್ದರು. ಇನ್ನು ಸೋಂಕು ದೃಢಪಟ್ಟು, ಗುಣಹೊಂದಿದ ವ್ಯಕ್ತಿಯಿಂದ 400 ಮಿ.ಲೀ ಪ್ಲಾಸ್ಮಾ ಪಡೆಯಲಾಗುತ್ತದೆ. ಅದರಲ್ಲಿ ತೀವ್ರ ತರಹದ ಸೋಂಕುಳ್ಳ ವ್ಯಕ್ತಿಗೆ 200 ಎಂಎಲ್ ಪ್ಲಾಸ್ಮಾವನ್ನು ಮೊದಲಬಾರಿಗೆ ನೀಡಲಾಗುತ್ತದೆ. ಕೆಲ ದಿನಗಳು ನಂತರ ಮತ್ತೆ 200 ಎಂಎಲ್‌ ಕೊಡಲಾಗುತ್ತದೆ. ಆ ಮೇಲೆ ಥೆರಪಿಗೊಳಪಟ್ಟ ವ್ಯಕ್ತಿಯ ಮೇಲೆ ನಿಗಾ ಇಡಲಾಗುತ್ತದೆ. ಹೀಗೆ ಪ್ಲಾಸ್ಮಾ ಥೆರಪಿ ನಡೆಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದ ಕಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದರಿಂದ ಸಧ್ಯದ ಮಟ್ಟಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ...

Edited By : Manjunath H D
Kshetra Samachara

Kshetra Samachara

18/02/2021 01:24 pm

Cinque Terre

50.39 K

Cinque Terre

0

ಸಂಬಂಧಿತ ಸುದ್ದಿ