ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಗೌಡ್ರ ಓಣಿಯ ಅಂಗನವಾಡಿಯಲ್ಲಿ ಆರಂಭವಾದ ಪೋಲಿಯೋ ಲಸಿಕೆ

ನವಲಗುಂದ : ಪಟ್ಟಣದ ಗೌಡ್ರ ಓಣಿಯ ಅಂಗನವಾಡಿಯಲ್ಲಿ ಇಂದು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತಿರುವ ಹಿನ್ನಲೆ ಅಂಗನವಾಡಿಯನ್ನು ರಂಗೋಲಿ ಮೂಲಕ ಅಲಂಕಾರಿಸಲಾಗಿತ್ತು. ಈ ವೇಳೆ ಮಕ್ಕಳಿಗೆ ಲಸಿಕೆಯನ್ನು ಹಾಕುವ ಮೂಲಕ ಚಾಲನೆ ನೀಡಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರಾದ ಹನುಮಂತ ತಳವಾರ, ಹುಸೇನಿ, ಧಾರವಾಡ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಂಗನವಾಡಿ ಸಿಬ್ಬಂದಿ ಮತ್ತು ಮಹಿಳೆಯರು ಭಾಗಿಯಾದರು.

Edited By : Manjunath H D
Kshetra Samachara

Kshetra Samachara

31/01/2021 04:22 pm

Cinque Terre

20.83 K

Cinque Terre

0

ಸಂಬಂಧಿತ ಸುದ್ದಿ