ಹುಬ್ಬಳ್ಳಿ: ಜನವರಿ 31 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಜರುಗಲಿದೆ. ಹುಬ್ಬಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 13,024 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಹಶಿಲ್ದಾರ ಪ್ರಕಾಶ ನಾಶಿ ಹೇಳಿದರು.
ಮಿನಿ ವಿಧಾನಸೌಧದ ತಾಲೂಕು ಸಭಾ ಭವನದಲ್ಲಿ ಜರುಗಿದ ತಾಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸಹಕರಿಸ ಬೇಕು. ಅಂಗನವಾಡಿ ಬೂತ್ ಗಳನ್ನು ನಿಯಮಾನುಸಾರ ಸ್ವಚ್ಛಗೊಳಿಸಿ ಸುರಕ್ಷಿತವಾಗಿರಿಸಬೇಕು. ಲಸಿಕೆಗಳನ್ನು ಸಾಗಿಸಲು ಅಗತ್ಯ ವಾಹನಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
ಜಿಲ್ಲಾ ಆರ್. ಸಿ.ಹೆಚ್ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ ಮಾತನಾಡಿ, ಪ್ರಸ್ತುತ ಕೋವಿಡ್ ಲಸಿಕೆಯ ಕಾರ್ಯ ಪ್ರಗತಿಯಲ್ಲಿದೆ. ಜ.17 ರಂದು ನಡೆಯಬೇಕಿದ್ದ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಜ.31 ರಂದು ಮುಂದೂಡಲ್ಪಟ್ಟಿತು. ಹುಟ್ಟಿನಿಂದ 5 ವರ್ಷದ ಮಕ್ಕಳಿಗೆ ಪೋಲಿಯೊ ಹಾಕಲಾಗುವುದು. ಗ್ರಾಮೀಣ ಪ್ರದೇಶದಲ್ಲಿ 164 ತಂಡಗಳು, 131 ಆಶಾ ಕಾರ್ಯಕರ್ತೆಯರು,146 ಅಂಗನವಾಡಿ ಕಾರ್ಯಕರ್ತೆಯರು, 17 ಮೇಲ್ವಿಚಾರಕರು ಅಭಿಯಾನದಲ್ಲಿ ಕಾರ್ಯ ನಿರ್ವಹಿಸುವರು.ಒಟ್ಟು 80 ಬೂತ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.
ಬೂತ್ ಗಳಲ್ಲಿ ಮಾಸ್ಕ್, ಸ್ಯಾನಿಟೈಜರ, ಸಾಮಾಜಿಕ ಅಂತರವು ಕಡ್ಡಾಯವಾಗಿರುತ್ತದೆ ಎಂದರು.
Kshetra Samachara
29/01/2021 09:37 pm