ಕುಂದಗೋಳ : ತಾಲೂಕಿನ ಗುಡಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯುವ ಜನ ಮೇಳದ ಸದಸ್ಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ತರಬೇತಿ ಕಾರ್ಯಗಾರವನ್ನು ವೈದ್ಯ ಬಿಂಕದಕಟ್ಟಿ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಭಾರಿ ಹಿರಿಯ ಮೇಲ್ವಿಚಾರಕ ರಾಜು ಕಬನೂರು ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅನುಸರಿಸಬೇಕಾದ ಆಹಾರ ಕ್ರಮ ಮತ್ತು ಶಾರೀರಿಕ ವ್ಯಾಯಾಮದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರೋಗ್ಯ ದೃಷ್ಟಿಯಿಂದ ಆಯಾ ವಯಸ್ಸಿನ ಅಂತರಕ್ಕೆ ಕೈಗೊಳ್ಳಬಹುದಾದ ಜೀವನ ಕ್ರಮಗಳ ಬಗ್ಗೆ ತಿಳಿಸಿದರು.
ಇನ್ನುಳಿದ ಮುಖ್ಯ ಅತಿಥಿಗಳಾದ ಕಾವ್ಯ ಹಿರೇಮಠ, ಜ್ಯೋತಿ ಹಿರೇಮಠ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಂಭಯ್ಯ ಹಿರೇಮಠ ಕಲಾ ತಂಡದ ಅಧ್ಯಕ್ಷರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆಯಲ್ಲಿ ಹರ್ಲಾಪುರ, ಸುಲ್ತಾನಪುರ, ಕಳಸ, ಸಂಕ್ಲೀಪುರ, ಗ್ರಾಮಗಳಲ್ಲೂ ಈ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಈಶ್ವರ ಅರಳಿ ಮಾಡಿದರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮರಿ ಕಾರ್ಯಕ್ರಮ ನಡೆಸಿಕೊಟ್ಟರು.
Kshetra Samachara
22/01/2021 05:39 pm