ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಆಸ್ಪತ್ರೆ. ಕೋವಿಡ್ ಸಂದರ್ಭದಲ್ಲಿ ಶತಾಯು ಗತಾಯು ಹೋರಾಟ ನಡೆಸಿದ ಆಸ್ಪತ್ರೆ. ಆದ್ರೇ ಈ ಆಸ್ಪತ್ರೆಯ ಸಿಬ್ಬಂದಿಗಳೇ ಕೊವೀಡ್ ವ್ಯಾಕ್ಸಿನ್ ಪಡೆಯುವಲ್ಲಿ ಹಿಂದೇಟು ಹಾಕುತ್ತಿರುವಂತ ಮಾತೊಂದು ಕೇಳಿ ಬರುತ್ತಿದೆ.ಅಷ್ಟಕ್ಕೂ ಯಾವುದು ಆ ಆಸ್ಪತ್ರೆ. ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...
ಕರ್ನಾಟಕದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ಹೆಚ್ಚಿನ ಸದಸ್ಯರು ಕೋವಿಡ್ ಲಸಿಕೆ ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು, ತಂತ್ರಜ್ಞರು, ಗುಂಪು ಡಿ ಕಾರ್ಮಿಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರರು ಸೇರಿದಂತೆ ಸುಮಾರು 2500 ಸಿಬ್ಬಂದಿ ಇದ್ದಾರೆ.ಆದ್ರೆ ಬಹುತೇಕ ಜನರು ಮಾತ್ರ ಕೊವೀಡ್ ವ್ಯಾಕ್ಸಿನ್ ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 22,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಈ ರೋಗಿಗಳಲ್ಲಿ ಹೆಚ್ಚಿನವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಬ್ಬಂದಿಯ 60 ಕ್ಕೂ ಹೆಚ್ಚು ಸದಸ್ಯರು ಸ್ವತಃ ಕೋವಿಡ್ ಸೋಂಕಿಗೆ ಒಳಗಾಗಿದ್ದರು.ಆದರೂ ಕೂಡ ಸರ್ಕಾರ ಹಗಲಿರುಳು ಶ್ರಮಿಸಿ ಕಂಡು ಹಿಡಿದ ವ್ಯಾಕ್ಸಿನ್ ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂಬುವಂತ ಮಾತುಗಳು ಬಲ್ಲ ಮೂಲದಿಂದ ತಿಳಿದು ಬಂದಿದೆ.
ಲಸಿಕೆಯ ದಕ್ಷತೆ ಮತ್ತು ಇತರ ಅಂಶಗಳ ಬಗ್ಗೆ ದೀರ್ಘಕಾಲೀನ ಅಧ್ಯಯನದ ಅವಶ್ಯಕತೆಯಿದೆ.ಲಸಿಕೆ ಉತ್ಪಾದಕರು ಕೇವಲ 50-80 ಪ್ರತಿಶತದಷ್ಟು ದಕ್ಷತೆಯನ್ನು ಮಾತ್ರ ಹೇಳಿಕೊಳ್ಳುತ್ತಿದ್ದಾರೆ ಮತ್ತು ಬಳ್ಳಾರಿಯಲ್ಲಿ ಆರೋಗ್ಯ ಸಿಬ್ಬಂದಿಯೊಬ್ಬರು ಇತ್ತೀಚಿನ ದಿನದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ಫಲಾನುಭವಿಗಳು ನಿರ್ಧರಿಸಬೇಕು.ಆದರೇ ವೈದ್ಯಕೀಯ ಸಿಬ್ಬಂದಿಗಳೇ ಹಿಂದೇಟು ಹಾಕಿದರೇ ಜನಸಾಮಾನ್ಯರ ಪಾಡು ಏನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಸರ್ಕಾರ ಕೋವಿಡ್ ವ್ಯಾಕ್ಸಿನ್ ತರುವ ಹಿನ್ನೆಲೆಯಲ್ಲಿ ಸಾಕಷ್ಟು ಶ್ರಮವಹಿಸಿದೆ.ಆದ್ರೇ ವೈದ್ಯಕೀಯ ಸಿಬ್ಬಂದಿಗಳು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಸರ್ಕಾರದ ಪ್ರಯತ್ನ ವಿಫಲವಾಯಿತೇ ಎಂಬುವಂತ ಪ್ರಶ್ನೆಗಳು ಕಾಡುವುದು ಸಹಜವಾಗಿದೆ.
Kshetra Samachara
21/01/2021 08:30 pm