ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ವಾರಿಯರ್ಸ್

ಧಾರವಾಡ: ಜಗತ್ತನ್ನೇ ತಲ್ಲಣಗೊಳಿಸಿದ್ದ ಕೊರೊನಾ ಸೋಂಕಿಗೆ ಭಾರತದ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ. ಈಗಾಗಲೇ ಈ ಸಂಜೀವಿನಿಯನ್ನು ಭಾರತದಾದ್ಯಂತ ಪೂರೈಕೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ಈ ಲಸಿಕೆ ನೀಡಲಾಗುತ್ತಿದೆ. ಧಾರವಾಡದಲ್ಲೂ ಮೊದಲು ಕೊರೊನಾ ವಾರಿಯರ್ಸ್ ಗೆ ಶನಿವಾರ ಲಸಿಕೆ ನೀಡಲಾಗಿದೆ.

ಧಾರವಾಡದ ಪುರೋಹಿತನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನವೀನಕುಮಾರ ಈಳಿಗೇರ, ಅಕ್ಕಮ್ಮ ಬಡಿಗೇರ, ಬಿ.ಎಸ್.ವಿಜಯ, ಗಂಗಮ್ಮ ಬಡಸದಾರ, ಬೀನಾ ಬೊಮ್ಮನಹಳ್ಳಿ ಹಾಗೂ ಹಜರತಬೀ ನದಾಫ್ ಅವರಿಗೆ ಕೊರೊನಾ ಲಸಿಕೆ ಹಾಕಲಾಗಿದೆ.

ಇಂದು ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಧಾರವಾಡದ ಪುರೋಹಿತನಗರದಲ್ಲಿರುವ ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗಿದ್ದ ಲಸಿಕೆಯ ಬಾಕ್ಸ್ ನ್ನು ಹೊರ ತೆಗೆದು ಅದಕ್ಕೆ ಆಸ್ಪತ್ರೆ ವೈದ್ಯಾಧಿಕಾರಿಗಳು ಪೂಜೆ ಸಲ್ಲಿಸಿದರು. ನಂತರ ಆರು ಜನರಿಗೆ ಲಸಿಕೆ ಹಾಕಲಾಗಿದ್ದು, ಲಸಿಕೆ ಹಾಕಿಸಿಕೊಂಡವರಿಗೆ ಏನಾದರೂ ಸಮಸ್ಯೆಯಾಗಿದೆಯೇ ಎಂದು ಅವರನ್ನು ಒಂದು ಪ್ರತ್ಯೇಕ ಕೊಠಡಿಯಲ್ಲಿಟ್ಟು ಅವರ ಮೇಲೆ ನಿಗಾ ವಹಿಸಲಾಯಿತು.

ಧಾರವಾಡದ 7 ಕೇಂದ್ರಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಗೆ ಒಟ್ಟು 11 ಸಾವಿರ ಲಸಿಕೆ ಪೂರೈಕೆಯಾಗಿದ್ದು, ಕಲಘಟಗಿ, ಕುಂದಗೋಳ, ನವಲಗುಂದ, ಗರಗ, ಎಸ್ ಡಿಎಂ, ಕಿಮ್ಸ್ ಹಾಗೂ ಪುರೋಹಿತನಗರದ ಆಸ್ಪತ್ರೆಯಲ್ಲಿ ಈ ಲಸಿಕೆ ನೀಡಲಾಗುತ್ತಿದೆ. ಈ ಏಳು ಕೇಂದ್ರಗಳ ಮೂಲಕ ತಲಾ 100 ಜನ ವಾರಿಯರ್ಸ್ ಗಳಿಗೆ ಲಸಿಕೆ ಹಾಕಲಾಗುತ್ತಿದೆ. ಭಾನುವಾರದಿಂದ ಜಿಲ್ಲೆಯ 136 ಕೇಂದ್ರಗಳ ಮೂಲಕ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

16/01/2021 01:42 pm

Cinque Terre

25.83 K

Cinque Terre

0

ಸಂಬಂಧಿತ ಸುದ್ದಿ