ಕಲಘಟಗಿ:ತಾಲೂಕಿನ ತಾವರಗೇರಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ತಾಲೂಕಾ ಬಿಜೆಪಿ ಯುವಮೋರ್ಚಾದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಒಟ್ಟು 72 ಜನರ ಆರೋಗ್ಯ ತಪಾಸಣೆ ಮಾಡಿ ಸಾರ್ವಜನಿಕರಲ್ಲಿ ಉತ್ತಮ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ ಧ್ಯಾವಪ್ಪನವರ,ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರದೀಪ ಕಸಲಕರ,ಶಂಕರ ಜೋಡಳ್ಳಿ,ಬಸವರಾಜ ಪುಟ್ಟಪ್ಪನವರ,ನಿಂಗಪ್ಪ ಸುತಗಟ್ಟಿ,ಕಲ್ಲಪ್ಪ ಪುಟ್ಟಪ್ಪನವರ ಹಾಗೂ ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು.
Kshetra Samachara
12/01/2021 04:37 pm