ಕುಂದಗೋಳ : ಕಸ, ಕಂಟಿ ಹುಲ್ಲು ಬೆಳೆದು ಶೀಥಿಲಗೊಂಡ ಹಳೆಯ ಕಟ್ಟಡದ ಅನೈರ್ಮಲ್ಯದ ನಡುವೆ ಕುಂದಗೋಳ ತಾಲೂಕಿನ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕುಂದಗೋಳದ ಪಶು ಆಸ್ಪತ್ರೆಯ ಹಳೆ ಕಟ್ಟಡ ನೆಲಸಮವಾಗಿ ನೂತನ ಕಟ್ಟಡದ ಕಾಮಗಾರಿ ಆರಂಭಗೊಂಡಿದೆ.
ಹೌದು ! ಇಡೀ ಕುಂದಗೋಳ ತಾಲೂಕಿನ ಕೇಂದ್ರಸ್ಥಾನ ಪಶು ಆಸ್ಪತ್ರೆಯ ಕಟ್ಟಡಲ್ಲಿನ ಅನೈರ್ಮಲ್ಯದ ಬಗ್ಗೆ ಈ ಹಿಂದೆ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿ ಮಳೆಗಾಲದಲ್ಲಿ ಹಸು, ದನ, ಕರುಗಳಿಗೆ ಚಿಕಿತ್ಸೆ ಸೇರಿದಂತೆ ಕಟ್ಟಡದ ಸುತ್ತ ಬೆಳೆದ ಹುಲ್ಲು ಕಸ ಕಡ್ಡಿಗಳ ಅನೈರ್ಮಲ್ಯ ಹಾಗೂ ನಿರ್ವಹಣೆ ಕಾಣದೆ ಎಲ್ಲೇಂದರಲ್ಲಿ ಬಳಸಿ ಬಿಸಾಡಿದ ವಸ್ತುಗಳ ಬಗ್ಗೆ ವರದಿ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ಸದ್ಯ ಈ ಹಿಂದೆ ಕೇಂದ್ರ ಸಚಿವರ ಅನುದಾನ ಅಡಿಯಲ್ಲಿ ಹೊಸ ಕಟ್ಟಡದ ಪ್ರಸ್ತಾವನೆಯಲ್ಲಿ ಮಂಜೂರಾಗಿದ್ದ ಪಶು ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಗೆ ಸ್ವತಃ ಕೇಂದ್ರ ಸಚಿವರೇ ಆಗಮಿಸಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದು, ಕಳೆದೊಂದು ತಿಂಗಳಿನಿಂದ ಕುಂದಗೋಳ ಪಟ್ಟಣದ ನೂತನ ಪಶು ಆಸ್ಪತ್ರೆ ಕಟ್ಟಡದ ಕಾಮಗಾರಿ ಆರಂಭಗೊಂಡಿದ್ದು, ಇಡೀ ತಾಲೂಕಿನ ಜನರೇ ಸಂತಸ ವ್ಯಕ್ತಪಡಿಸಿದ್ದಾರೆ.
Kshetra Samachara
09/01/2021 07:40 pm