ಧಾರವಾಡ: ಜಿಲ್ಲೆಯಾದ್ಯಂತ ಇಂದು ಮತ್ತೆ 277 ಜನ ಶಂಕಿತ ಸೋಂಕಿತರಿಂದ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ನೀಡಲಾಗಿದೆ. ಆ ಮೂಲಕ ಇದುವರೆಗೆ ಮಾದರಿ ಸಂಗ್ರಹಿಸಿದವರ ಸಂಖ್ಯೆ 333231 ಕ್ಕೆ ಏರಿಕೆಯಾಗಿದೆ.
ನಿನ್ನೆ ಕಳುಹಿಸಿದ ಮಾದರಿ ಪೈಕಿ 174 ಜನರ ವರದಿ ನೆಗೆಟಿವ್ ಬಂದಿದೆ. 14 ಜನರ ವರದಿ ಪಾಸಿಟಿವ್ ಎಂದು ಬಂದಿದೆ. ಇದರೊಟ್ಟಿಗೆ ಜಿಲ್ಲೆಯಾದ್ಯಂತ ಇನ್ನೂ 275 ಜನರ ವರದಿ ಬರುವುದು ಬಾಕಿ ಉಳಿದಿದೆ.
ಇದುವರೆಗೆ 333231 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅದರಲ್ಲಿ 332246 ಜನರ ವರದಿ ನೆಗೆಟಿವ್ ಎಂದು ಬಂದಿದೆ. 21962 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 21252 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 610 ಜನ ಸೋಂಕಿನಿಂದ ಮೃತಪಟ್ಟಿದ್ದರೆ, ಬಾಕಿ ಇರುವ 103 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಜಿಲ್ಲೆಯಾದ್ಯಂತ ಒಟ್ಟು 336338 ಜನರ ಮೇಲೆ ನಿಗಾ ಇಡಲಾಗಿದ್ದು, 22039 ಜನರನ್ನು 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. 35994 ಜನ ಈಗಾಗಲೇ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 278202 ಜನ 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
Kshetra Samachara
08/01/2021 10:20 pm