ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಶಿಕ್ಷಣಕ್ಕಾಗಿ ಸಿದ್ದವಾಗಿದೆ ತಿಳಿಗನ್ನಡದ " PrepEd '' App

ರೋಗಿಗಳ ಅತ್ಯಂತ ಕ್ಲಿಷ್ಟಕರ ಚಿಕಿತ್ಸೆಗಾಗಿ ವೈದ್ಯ ಸಮುದಾಯ ನಿತ್ಯ ಹೋರಾಡುತ್ತದೆ. ಅದರಲ್ಲೂ ಹಾರ್ಟ್, ಕಿಡ್ನಿ. ಲಿವರ್, ಬ್ರೇನ್ ಆಪರೇಷನ್ ಅಂತೂ ವೈದ್ಯರಿಗೆ ಸವಾಲಿನ ಕಾರ್ಯ. ಈ ಸಮಯದಲ್ಲಿ ಅವರೊಂದಿಗೆ ಕೈ ಜೋಡಿಸಿ, ಪ್ರತಿ ಕ್ಷಣದಲ್ಲಿ ಸಹಾಯಕ್ಕೆ ನಿಲ್ಲುವವರೇ ನರ್ಸ್ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ.

ಅಧಿಕೃತವಾಗಿ ಎಂಬಿಬಿಎಸ್ ಶಿಕ್ಷಣ ಪಡೆಯದಿದ್ದರೂ ನರ್ಸ್ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಆಪರೇಷನ್ ಅಥವಾ ಲೈಫ್ ಸೇವಿಂಗ್ ಪ್ರಕ್ರಿಯೆಯಲ್ಲಿ ಇವರ ಸೇವೆ ಅನುಪಮ. ಆಪರೇಷನ್ ಸಮಯದಲ್ಲಿ ವೈದ್ಯರ ಹಾವ ಭಾವಗಳಿಂದಲೇ ಸೂಚನೆಗಳನ್ನುಚಾಚೂ ತಪ್ಪದೆ ಪಾಲಿಸಿ ಅವರಿಗೆ ನೆರವಾಗಿ ನಿಲ್ಲುವ ಅರೆ ವೈದ್ಯಕೀಯ ಹಾಗೂ ದಾದಿಯರಿಗೆ ಬೇಕೆ ಬೇಕು ಸೂಕ್ತ ಶಿಕ್ಷಣ ಹಾಗೂ ತರಬೇತಿ.

ಆದರೆ, ಈಗ ನರ್ಸಿಂಗ್ ಅಥವಾ ಪ್ಯಾರಾ ಮೆಡಿಕಲ್ ಕೋರ್ಸ ನಡೆಸುವ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಶಿಕ್ಷಣ ದೊರೆಯುತ್ತಿದೆಯೇ? ಸಧ್ಯದ ಪರಿಸ್ಥಿತಿ ಗಮನಿಸಿದರೆ ಇಲ್ಲವೇ ಇಲ್ಲವೆಂದು ಹೇಳಬಹುದು.

ಅದಕ್ಕೆ ಕಾರಣ ಹಲವು. ಅರ್ಹ ಉಪನ್ಯಾಸಕರ ಕೊರತೆ ಹಾಗೂ ಭಾಷೆ ಸಮಸ್ಯೆ. ನರ್ಸಿಂಗ್ ಕಾಲೇಜುಗಳ ಶಿಕ್ಷಣ ನಡೆಯುವುದು ಇಂಗ್ಲೀಷ್ ಮಾಧ್ಯಮದಲ್ಲಿ. ಕನ್ನಡ ಮಾಧ್ಯಮದಿಂದ ನೇರವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವವರಿಗೆ ಮೆಡಿಕಲ್ ಟರ್ಮ್ ಗಳನ್ನು ತಿಳಿದುಕೊಳ್ಳವುದು ಕಷ್ಟಸಾಧ್ಯ. ಹೀಗಾಗಿ ಕಲಿಕೆಯು ಅರ್ಥವಾಗದ ಕಾರಣ ಬಹುತೇಕ ವಿದ್ಯಾರ್ಥಿಗಳು ಫೇಲ್ ಆಗುತ್ತಲೇ ಹೋಗುತ್ತಾರೆ ಇಲ್ಲವೆ ಮಧ್ಯದಲ್ಲಿಯೇ ತರಬೇತಿ ಕೈ ಬಿಡುತ್ತಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ತರಬೇತಿಯ ಕೊರತೆ ಇದೆ.

ಈ ಹಿನ್ನೆಲೆಯಲ್ಲಿ ರೂಪಿತವಾದ, ಇಂಗ್ಲೀಷ್ ಜೊತೆ ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ " PrepEd '' ಎಂಬ Andriod App ಹಂತ ಹಂತ ಜನಪ್ರಿಯವಾಗ ತೊಡಗಿದೆ. ಈಗಾಗಲೇ 1000 ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರಲ್ಲದೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡು ಕಲಿಕೆ ಆರಂಭಿಸಿದ್ದಾರೆ.

ಸಧ್ಯ App ನಲ್ಲಿ ನಾಲ್ಕು ವಿಭಾಗಗಳ ವಿಷಯಗಳ ಬೋಧನೆ ನಡೆಯುತ್ತಿದೆ. ಹಂತ ಹಂತವಾಗಿ ಹೆಚ್ಚುವರಿ ಕೋರ್ಸ್ ಸೇರ್ಪಡೆಯಾಗಲಿವೆ. ಮುಂದಿನ ದಿನಗಳಲ್ಲಿ ಹಿಂದಿ ಸೇರಿದಂತೆ ದೇಶದ ಪ್ರಮುಖ ಭಾಷೆಗಳಲ್ಲಿ ಬೋಧನೆ ಮಾಡುವ ಸಿದ್ಧತೆ ನಡೆದಿದೆ. preped.in ಲಿಂಕ್ ಮೂಲಕ ಯಾವುದೇ ವಿದ್ಯಾರ್ಥಿ App ಡೌನ್‍ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಉಚಿತವಾಗಿ ಕೆಲವು ತರಗತಿಗಳನ್ನು ಆಲಿಸುವ ಅವಕಾಶಗಳನ್ನು ಕಲ್ಪಿಸಲಾಗಿದೆ. ಕಲಿಕೆ ಇಷ್ಟವಾದ ವಿದ್ಯಾರ್ಥಿಗೆ ನೋಂದಾಯಿಸಿಕೊಳ್ಳಲು ಒಂದು ವರ್ಷಕ್ಕೆ ಕೇವಲ 190 ರೂ. ಶುಲ್ಕ ವಿಧಿಸಲಾಗುತ್ತಿದೆ. 50 ರೂ.ನೀಡಿ ಒಂದೇ ತಿಂಗಳು ಸಬ್ಸ್ಕ್ರೈಬ್ ( ಚಂದಾದಾರ) ಆಗುವ ಅವಕಾಶವನ್ನೂ ಕಲ್ಪಿಸಲಾಗಿದೆ. ಬಡ ವಿದ್ಯಾರ್ಥಿಗಳಿಗೆ ಶೇ.50 ರಿಯಾಯಿತಿ ನೀಡುವ ಯೋಜನೆಯನ್ನೂ ಜಾರಿಗೊಳಿಸಲಿದ್ದೇವೆ ಡಾ.ಸಂದೀಪ. ಎನ್ನುತ್ತಾರೆ ಡಾ: ಸಂದೀಪ್.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲದೆ ನೆರೆಯ ಆಂಧ್ರ, ಮಹಾರಾಷ್ಟ್ರದ ಕನ್ನಡ ವಿದ್ಯಾರ್ಥಿಗಳು prepd.in ಲಿಂಕ್ ಮೂಲಕ ಡೌನಲೋಡ್ ಮಾಡಿಕೊಂಡಿದ್ದಾರೆ. ಇಂಗ್ಲೀಷ್ ಭಾಷೆಯಲ್ಲಿ ಅರ್ಥವಾಗದ ಕೆಲವು ಮಾಹಿತಿಗಳು ಸುಲಭವಾಗಿ " PrepEd '' App ದಲ್ಲಿ ಸಿಗುತ್ತಿರುವುದರಿಂದ ಕಲಿಕೆ ಅತ್ಯಂತ ಸುಲಭವಾಗಿದೆ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಾರೆ, App ರೂವಾರಿ ಹಾಗೂ ಕಿಡ್ನಿ ತಜ್ಞ ವೈದ್ಯಾರಿಗಿರುವ ಬಾಗಲಕೋಟೆಯ

ಡಾ: ಸಂದೀಪ್ ಹುಯಿಲಗೋಳ.

ಬನ್ನಿ " PrepEd '' App ಹಿಂದಿನ ಉದ್ದೇಶ ಹಾಗೂ ಅದರ ಪ್ರಯೋಜನ ಕುರಿತು ಡಾ: ಸಂದೀಪ್ ಅವರಿಂದಲೇ ಕೇಳೋಣ.

ಹಾಗೇ ಅವರ ತಂಡದಲ್ಲಿರುವ ಸಾಫ್ಟ್ ವೇರ್ ಇಂಜನೀಯರ್ ಕಾರ್ತಿಕ ಮುಳಗುಂದ ಉಪನ್ಯಾಸಕರಾದ ಡಾ: ಸಂಗಮೇಶ ರಕರಡ್ಡಿ, ಶಿವಾನಂದ ಯರಗಲ್ , ಪ್ರೊ: ವಿದ್ಯಾಧರ್ ಜಾಡರ್ ವಿದ್ಯಾರ್ಥಿಗಳಿಗೆ App ದಿಂದ ಅಗುವ ಉಪಯೋಗದ ಬಗ್ಗೆ ಮಾತನಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

08/12/2021 05:11 pm

Cinque Terre

39.55 K

Cinque Terre

1

ಸಂಬಂಧಿತ ಸುದ್ದಿ