ನವಲಗುಂದ : ಜನವರಿ 3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ನಡೆಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಲಸಿಕಾ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಸೋಮವಾರ ನವಲಗುಂದ ಪಟ್ಟಣದ ಲಿಂಗರಾಜವಾಡೆಯ ರೋಟರಿ ಪ್ರೌಢಶಾಲೆ ಸೇರಿದಂತೆ ಇಲ್ಲಾ ಶಾಲೆಗಳಲ್ಲೂ ಲಸಿಕೆ ನೀಡಲಾಯಿತು.
ಇನ್ನು ಧಾರವಾಡ ಜಿಲ್ಲೆಯಲ್ಲಿ ಒಟ್ಟು 95,774 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಪಟ್ಟಣದ ಲಿಂಗರಾಜವಾಡೆಯ ರೋಟರಿ ಪ್ರೌಢ ಶಾಲೆಯಲ್ಲಿ 15 ರಿಂದ 18 ವಯಸ್ಸಿನ ಮಕ್ಕಳಿಗೆ ಕೊವ್ಯಾಕ್ಸಿನ್ ಮೊದಲ ಡೋಸ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
Kshetra Samachara
03/01/2022 07:34 pm