ನವಲಗುಂದ : ನಾಳೆ ಅಕ್ಟೊಬರ್ 22 ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೋವಿಡ್ 19 ರೋಗನಿರೋಧಕ ಲಸಿಕಾಕರಣ ಅಭಿಯಾನವನ್ನು ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಆಯೋಜಿಸಿದ್ದು, ನಾಳೆಯಿಂದ ಒಂದು ವಾರದೊಳಗೆ ಲಸಿಕೆ ಪಡೆಯುವ ಪಲಾನುಭವಿಗಳಲ್ಲಿ ಲಕ್ಕಿ ಡ್ರಾ ಮೂಲಕ ಸೀಮಿತ ಸಂಖ್ಯೆಯ ವಿಜೇತರನ್ನು ಆಯ್ಕೆ ಮಾಡಿ ನಗದು ಬಹುಮಾನ, ಕುಕ್ಕರ್, ಫುಡ್‍ಕಿಟ್ ನೀಡಲಾಗುವುದು ಎಂದು ಇಂದು ನಡೆದ ಬೃಹತ್ ಲಸಿಕಾ ಅಭಿಯಾನ ಆಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಇನ್ನು ಈ ಹಿನ್ನೆಲೆ ನವಲಗುಂದ ಪಟ್ಟಣದ ಚವಡಿ, ಬಸವೇಶ್ವರ ನಗರ, ಬೀರದೇವರ ಗುಡಿ, ಧ್ಯಾಮವ್ವನ ಗುಡಿಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ನವಲಗುಂದ ಪುರಸಭೆ ಮುಖ್ಯಾಧಿಕಾರಿಗಳಾದ ವಿರೇಶ್ ಹಸಬಿ ಅವರು ತಿಳಿಸಿ, ಲಸಿಕಾ ಅಭಿಯಾನದಲ್ಲಿ ಫಲಾನುಭವಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
Kshetra Samachara
21/10/2021 10:16 pm