ಕುಂದಗೋಳ : ಕಳೆದ ನಾಲ್ಕೈದು ದಿನಗಳಿಂದ ರಾಜ್ಯದೆಲ್ಲೇಡೆ ತುಂತುರು ಮಳೆ ತಂಪಾದ ಹವಾಗುಣದ ವಾತಾವರಣ ಮುಂದುವರೆದಿದ್ದು, ಜನ ಹಗಲಲ್ಲೇ ಚಳಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ತಂಪಾದ ಹವಾಗುಣದ ವಾತಾವರಣವೂ ಕುಂದಗೋಳ ತಾಲೂಕಿನ ಎಲ್ಲೇಡೆ ಹೆಚ್ಚಾಗಿ ಆಗಾಗ ಜಿಟಿ ಜಿಟಿ ಮಳೆ ಸಹ ಸುರಿಯುತ್ತಿದೆ. ಈ ಪರಿಣಾಮ ಕಳೆದ ಎರೆಡು ತಿಂಗಳಿಂದ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ಜನರು ಏಕಾಏಕಿ ಬಿಸಿದ ತಂಪಾದ ಹವಾಗುಣದ ಪರಿಣಾಮ ಕಾಯಿಲೆಯಿಂದ ಆಸ್ಪತ್ರೆಗೆ ಅಲೆದಾಟ ಆರಂಭಿಸಿದ್ದಾರೆ.
ಈಗಾಗಲೇ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಓಪಿಡಿಯಲ್ಲಿ ನೋಂದಣಿ ರೋಗಿಗಳ ಸಂಖ್ಯೆ ಹೆಚ್ಚಿದ್ದು ನಾನಾ ಕಾಯಿಲೆ ಹೊತ್ತು ಜನ ವೈದ್ಯರನ್ನು ಕಾಣುತ್ತಿದ್ದಾರೆ. ಇದೇ ನವೆಂಬರ್ 11 ರಂದು 195 ಜನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬಂದ್ರೇ, 12 ರಂದು 141 ಜನ, ಇಂದು ಒಂದು ಗಂಟೆ ಒಳಗೆ 106 ಜನ ಓಪಿಡಿ ಕೌಂಟರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ವೈದ್ಯರನ್ನು ಭೇಟಿ ಆಗಿ ಔಷಧೋಪಚಾರ ಪಡೆದಿದ್ದಾರೆ.
ಹವಾಗುಣ ಬದಲಾದ ಪರಿಣಾಮ ವಯೋವೃದ್ಧರು, ಮಕ್ಕಳು, 40 ವಯಸ್ಸು ಮೇಲ್ಪಟ್ಟವರೇ ಹೆಚ್ಚಾಗಿ ವೈದ್ಯರನ್ನು ಕಾಣುತ್ತಿದ್ದು ಆದಷ್ಟೂ ಸಾರ್ವಜನಿಕರು ಸುರಕ್ಷತೆ ವಹಿಸಿ ಎಚ್ಚರಿಕೆಯಿಂದ ಇರಬೇಕಾಗಿದೆ.
Kshetra Samachara
13/11/2021 04:59 pm