ಧಾರವಾಡ: 'ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚೀಟಿ ಮಾಡಿಸಲು ಜನಜಂಗುಳಿ' ಎಂಬ ಶೀರ್ಷಿಕೆಯಡಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ್ದ ವರದಿಗೆ ಜಿಲ್ಲಾ ಸರ್ಜನ್ ಸ್ಪಂದಿಸಿದ್ದಾರೆ.
ಸದ್ಯ ಎಲ್ಲರೂ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು, ಹೀಗಾಗಿ ಎಲ್ಲರೂ ವೈದ್ಯರನ್ನು ಕಾಣಲು ಜಿಲ್ಲಾಸ್ಪತ್ರೆಗೆ ಲಗ್ಗೆ ಇಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚೀಟಿ ಮಾಡಿಸಲು ಜನ ಗುಂಪುಗಟ್ಟಿ ಬರುತ್ತಿದ್ದರು. ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿರಲಿಲ್ಲ. ಹೀಗಾಗಿ ಇದರ ಮೇಲೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿತ್ತು.
ಇದರಿಂದ ಎಚ್ಚೆತ್ತುಕೊಂಡಿರುವ ಆಸ್ಪತ್ರೆ ಸಿಬ್ಬಂದಿ, ಅಲ್ಲಿ ಸಾಮಾಜಿಕ ಅಂತರ ಪಾಲನೆಗೆ ಮುಂದಾಗಿದ್ದಾರೆ. ಮಕ್ಕಳ ಮತ್ತು ಗರ್ಭಿಣಿಯರ ನೋಂದಣಿಗೆ ಪ್ರತ್ಯೇಕ ಕೌಂಟರ್, ಪರಸ್ಪರ ಸಾಮಾಜಿಕ ಅಂತರ ಪಾಲನೆಗೆ ನಿಗದಿತ ಸ್ಥಳದ ಅಂತರ ಗುರುತಿಸಿದೆ.
ಜಿಲ್ಲಾ ಆಸ್ಪತ್ರೆ ಆವರಣ ಹಾಗೂ ಆಸ್ಪತ್ರೆಯಲ್ಲಿ ಸಂಚರಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿ ನಿಯೋಜನೆ ಮಾಡಿದೆ.
Kshetra Samachara
20/01/2022 01:51 pm