ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಾತ್ರೆಗಳ ಮೇಲಿನ ನಿರ್ಬಂಧ ವಾಪಸ್ ಪಡೆಯದಿದ್ದಲ್ಲಿ ಉಗ್ರ ಹೋರಾಟ: ಮುತಾಲಿಕ್

ಹುಬ್ಬಳ್ಳಿ: ಜಾತ್ರೆ ಹಾಗೂ ಧಾರ್ಮಿಕ ಉತ್ಸವಗಳ ಮೇಲೆ ವಿಧಿಸಿರುವ ನಿರ್ಬಂಧಗಳ್ನು ರಾಜ್ಯ ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಫೆ. 4 ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ

ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಜಾತ್ರೆಗಳಿಂದ ಅನೇಕ ಕಾರ್ಮಿಕರ ಉಪಜೀವನ ನಡೆಯುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಹೇರುವ ನಿರ್ಬಂಧಗಳಿಂದ ಬೇಸತ್ತು ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗಲೇ ಎಲ್ಲದಕ್ಕೂ ನಿರ್ಬಂಧ ಸಡಿಲಗೊಳಿಸಲಾಗಿದೆ. ಆದರೆ ಜಾತ್ರೆಗಳಿಗೆ ನಿರ್ಬಂಧ ಹೇರುವುದು ಅವೈಜ್ಞಾನಿಕವಾಗಿದೆ. ಬಹುತೇಕ ದೊಡ್ಡ ದೊಡ್ಡ ಜಾತ್ರೆಗಳಿಂದ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತೆ. ಜಾತ್ರೆಗಳ ಮೇಲೆ ಬಡ ಕಾರ್ಮಿಕರ, ರೈತರ ಉಪಜೀವನ ನಿಂತಿದೆ. ಜಾತ್ರೆಗಳಿಗೆ ಧಾರ್ಮಿಕ ಸಂಪ್ರದಾಯವಿದೆ, ಆಚಾರ ವಿಚಾರವಿದೆ. ಸರ್ಕಾರ ವಿದೇಶಿ ಸಂಸ್ಕೃತಿಗೆ ನಿರ್ಬಂಧ ಸಡಿಲಗೊಳಿಸಿದೆ. ಆದರೆ ಸಾಂಪ್ರದಾಯಿಕ ಜಾತ್ರೆಗಳಿಗೆ ನಿರ್ಬಂಧನೆ ಹೇರಿದೆ ಯಾಕೆ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.

ಶೀಘ್ರವೇ ಸರ್ಕಾರ ಈ ನಿರ್ಬಂಧಗಳನ್ನ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಇದೇ ಫೆ.4 ರಂದು ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳ ಕಚೇರಿ, ಹಾಗೂ ತಾಲೂಕು ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2022 12:06 pm

Cinque Terre

94.19 K

Cinque Terre

6

ಸಂಬಂಧಿತ ಸುದ್ದಿ