ಧಾರವಾಡ: ಶತಾಯಗತಾಯ ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂದು ಧಾರವಾಡ ಜಿಲ್ಲಾಡಳಿತ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಜಿಲ್ಲಾಡಳಿತ ಆ್ಯಂಟಿಜನ್ ಮೂಲಕ ಕೊರೊನಾ ಟೆಸ್ಟ್ ಮಾಡುವ ಬಸ್ಸನ್ನು ರಸ್ತೆಗಿಳಿಸಿ ಮಾಸ್ಕ್ ಹಾಕದೇ ಇರುವವರನ್ನು ತಪಾಸಣೆಗೊಳಪಡಿಸುತ್ತಿದೆ. ಜೊತೆಗೆ ದಂಡವನ್ನೂ ವಿಧಿಸುತ್ತಿದೆ. ಇಂದು ಸ್ವತಃ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರೇ ರಸ್ತೆಗಿಳಿದು ಮಾಸ್ಕ್ ಹಾಕದೇ ಇರುವವರಿಗೆ ಬಿಸಿ ಮುಟ್ಟಿಸಿದರು.
Kshetra Samachara
06/10/2020 01:33 pm