ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕ್ಷೇತ್ರದಲ್ಲಿ ಒಟ್ಟು 13 ಶಾಲೆಗಳ ಸೀಲ್ ಡೌನ್; ಬಿ.ಎಸ್ ಮಾಯಾಚಾರ್ಯ

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ : ಯಾವ ಕಾರಣಕ್ಕೂ ವಿದ್ಯಾರ್ಥಿಗಳಾಗಲಿ ಶಿಕ್ಷಕರಾಗಲಿ ಮನೋಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಶೈಕ್ಷಣಿಕವಾಗಿ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಿದ್ದಪ್ಪ ಮಾಯಾಚಾರ್ಯ ಅವರು ತಿಳಿಸಿದರು.

ಹೌದು ಕೊರೋನಾ ಮೂರನೇ ಅಲೆ ಈಗ ನವಲಗುಂದ ತಾಲ್ಲೂಕಿನಲ್ಲಿನ ಮಕ್ಕಳಿಗೂ ಅಂಟುತ್ತಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟ ಹಿನ್ನೆಲೆ ಶಾಲೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಇನ್ನು ಇದುವರೆಗೂ ಸರ್ಕಾರಿ ಪ್ರೌಢ ಶಾಲೆ ಗುಡಿಸಾಗರ, ವಿವೇಕಾನಂದ ಪ್ರೌಢ ಶಾಲೆ ಹೆಬ್ಬಾಳ, ಮಾಡೆಲ್ ಬಾಲಕ ಹಾಗೂ ಬಾಲಕಿಯರ ಪ್ರೌಢ ಶಾಲೆ ನವಲಗುಂದ, ಸರ್ಕಾರಿ ಪ್ರೌಢ ಶಾಲೆ ನಾವಳ್ಳಿ, ಅಮೃತೇಶ್ವರ ಪದವಿ ಪೂರ್ವ ಕಾಲೇಜ್ ಮತ್ತು ಏನ್ ಎಸ್ ಹುಬ್ಬಳ್ಳಿ ಶಾಲೆ ಅಣ್ಣಿಗೇರಿ, ಎಚ್ ಕೆ ಎಸ್ ನಾಗರಹಳ್ಳಿ, ನಾಗಲಿಂಗೇಶ್ವರ ಪ್ರೌಢ ಶಾಲೆ ನವಲಗುಂದ ಶಾಲೆಗಳು ಸೇರಿದಂತೆ ಒಟ್ಟು 13 ಶಾಲೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನು ಒಟ್ಟು 110 ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟಿದ್ದು, 11 ಶಿಕ್ಷಕರಿಗೆ ಮಹಾಮಾರಿ ಒಕ್ಕರಿಸಿದೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಒಂದು ಶಾಲೆಯಲ್ಲಿ 5 ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟರೆ 3 ದಿನ ಸೀಲ್ ಡೌನ್ ಮಾಡಲಾಗುತ್ತಿದ್ದು, 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ದೃಢ ಪಟ್ಟರೆ 7 ದಿನ ಸೀಲ್ ಡೌನ್ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠವನ್ನು ಬೋಧಿಸಲು ಸಹ ಸಲಹೆ ಸೂಚನೆಯನ್ನು ನೀಡಿದ್ದೇವೆ. ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಯಾವ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮನೋಸ್ಥೈರ್ಯವನ್ನು ಕಳೆದುಕೊಳ್ಳ ಬಾರದು ಎಂದು ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಮಾಯಾಚಾರ್ಯ ಅವರು ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

24/01/2022 07:46 pm

Cinque Terre

74.11 K

Cinque Terre

0

ಸಂಬಂಧಿತ ಸುದ್ದಿ