ಹುಬ್ಬಳ್ಳಿ: ದಿನೇ ದಿನೇ ಹೆಚ್ಚಾಗುತ್ತಿರುವ ಮಹಾಮಾರಿ ಕೊರೊನಾಗೆ ದೇಶದೆಲ್ಲೆಡೆ ಆತಂಕ ಹೆಚ್ಚಾಗುತ್ತಿರುವುದು ಒಂದೆಡೆಯಾದರೇ ಇತ್ತ ಅವಳಿ ನಗರದ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಆತಂಕ ಎದುರಾಗಿದೆ. ಪೊಲೀಸರಿಗೆ ಯಾಕೆ ಕೊರೊನಾಂತಕ ಶುರುವಾಗಿದೆ ಅಂತಿನಾ ನಾವ್ ಹೇಳುತ್ತೇವೆ ಕೇಳಿ..
ಹೆಮ್ಮಾರಿ ಸೋಂಕಿಗೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಇದೀಗ ಕೊರೊನಾ ವಾರಿಯರ್ಸ್ ಗಳಾದ ಪೊಲೀಸ್ ಸಿಬ್ಬಂದಿಯಲ್ಲಿ ಈ ಸೋಂಕಿನ ಆತಂಕ ಹೆಚ್ಚಿದೆ.
150 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲರನ್ನೂ ಹೋಮ್ ಐಸೋಲೇಷನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಬ್ಬಳ್ಳಿ ಧಾರವಾಡದ ಪೊಲೀಸ್ ಠಾಣೆಯಗಳಲ್ಲಿ ಕಾರ್ಯನಿರ್ವಹಿಸುವ 150 ಪೊಲೀಸ್ ಸಿಬ್ಬಂದಿ, 9 ಇನ್ಸ್ ಪೆಕ್ಟರ್ ಗಳಲ್ಲಿ ಸೋಂಕು ಪತ್ತೆಯಾಗಿದೆ.
ಕಳೆದೊಂದು ವಾರದಿಂದ ಕೋವಿಡ್ ಆರ್ಭಟ ಹೆಚ್ಚಾಗಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವೇಳೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರಲ್ಲಿ ತೀವ್ರ ಸ್ವರೂಪದ ಜ್ವರ, ನೆಗಡಿ ಇಲ್ಲದೆ ಎಲ್ಲಾ ಸಿಬ್ಬಂದಿ ಗಳು ಹೋಮ್ ಐಸೋಲೆಷನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಾ ಸಿಬ್ಬಂದಿ ಗಳಿಗು ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು ಮತ್ತಷ್ಟು ಸಿಬ್ಬಂದಿ ಗಳ ವರದಿ ಬರಬೇಕಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆ ವೇಳೆಯು ಹಲವು ಸಿಬ್ಬಂದಿ ಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಬೂಸ್ಟರ್ ಡೋಸ್ ನೀಡುವ ಕಾರ್ಯವು ಮುಂದುವರಿದಿದೆ.
Kshetra Samachara
17/01/2022 05:03 pm