ಅಳ್ನಾವರ: ಕೊರೊನಾ ಮೂರನೇ ಅಲೆ ಓಮಿಕ್ರಾನ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಹೆಚ್ಚಾಗುತ್ತಿರುವ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಪ್ರತಿ ವಾರಾಂತ್ಯ ಅಂದರೆ ಶುಕ್ರವಾರ ರಾತ್ರಿ ಇಂದ ಸೋಮವಾರ ಬೆಳಗಿನ ವರೆಗೂ ವೀಕೆಂಡ್ ಕರ್ಫ್ಯೂ ಆದೇಶವನ್ನು ಜಾರಿಗೊಳಿಸಿದೆ.
ಆದರೆ ಅಳ್ನಾವರದಲ್ಲಿ ವೀಕೆಂಡ್ ಕರ್ಫ್ಯೂ ಗೆ ಸಾರ್ವಜನಿಕರು, ಅಂಗಡಿ ಮಾಲೀಕರು ಕ್ಯಾರೆ ಎನ್ನದೆ ದಿನನಿತ್ಯದ ಹಾಗೆ ವ್ಯಾಪಾರ ವಹಿವಾಟನ್ನು ಮುಂದುವರೆಸಿದ್ದಾರೆ. ಯಾರೊಬ್ಬರಿಗೂ ಮಾಸ್ಕ್ ಇಲ್ಲದೆ,ಸಾಮಾಜಿಕ ಅಂತರವಿಲ್ಲದೆ ಓಡಾಡುವುದು ಕಂಡು ಬಂದಿತು.
ಯಾರನ್ನೇ ಕೇಳಿದರು ಮಧ್ಯಾಹ್ನ ಎರಡು ಗಂಟೆಯ ವರೆಗೆ ಓಪನ್ ಮಾಡುವ ರೂಲ್ಸ್ ಇದೆ,ಎರಡು ಗಂಟೆ ಯಾದ ನಂತರ ನಾವು ವ್ಯಾಪಾರ,ಅಂಗಡಿಗಳನ್ನ ಮುಚ್ಚುತ್ತೇವೆ ಎಂಬ ಉಡಾಫೆ ಉತ್ತರ ದೊರಕುತ್ತದೆ.ಸರ್ಕಾರದ ಆದೇಶದ ಪ್ರಕಾರ ಅಗತ್ಯ ವಸ್ತುಗಳನ್ನ ಮಾತ್ರ ಅಂದರೆ ಮೆಡಿಕಲ್ ಶಾಪ್,ಹಾಲಿನ ಅಂಗಡಿ,ಹೋಟೆಲ್ ಓಪನ್ ಇದ್ರು ಪಾರ್ಸಲ್ ಗೆ ಮಾತ್ರ ಅವಕಾಶ,ಅನಾವಶ್ಯಕವಾಗಿ ಯಾರು ಓಡಾಡಬಾರದು,ಸಾದ್ಯ ವಾದಷ್ಟು ಮನೇಲೆ ಇದ್ದು ಕೊರೊನಾ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕು ಎಂಬುದು.ಆದರೆ ಅಳ್ನಾವರ ತಾಲೂಕಿನಲ್ಲಿ ಈ ಎಲ್ಲ ಆದೇಶಗಳನ್ನ ಗಾಳಿಗೆ ತೂರಿ,ಏನು ಅರಿಯದಂತೆ ಇರುವುದು ನಿಜಕ್ಕೂ ಭೀತಿ ಹುಟ್ಟಿಸುವಂತದ್ದಾಗಿದೆ. ಇದೆಲ್ಲವೂ ಗೊತ್ತಿದ್ದರು ಪೊಲೀಸರು ಸುಮ್ಮನಿರುವುದು ನಿಜಕ್ಕೂ ಬೇಸರದ ಸಂಗತಿ.
ವಾರದ ಎರಡು ದಿನವಾದರೂ ಮನೆಲೆ ಇದ್ದು,ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರೆಲ್ಲರು ಸಹಕರಿಸುವ ಉದ್ದೇಶದಿಂದ ವೀಕೆಂಡ್ ಕರ್ಫ್ಯೂ ವನ್ನು ಜಾರಿಗೊಳಿಸಲಾಗಿದೆ.ಮಾಸ್ಕ್ ಇಲ್ಲದೆ,ಸಾಮಾಜಿಕ ಅಂತರವಿಲ್ಲದೆ ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಭಯಾನಕ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್
ಅಳ್ನಾವರ.
Kshetra Samachara
16/01/2022 04:50 pm