ವರದಿ: ಬಿ. ನಂದೀಶ
ಅಣ್ಣಿಗೇರಿ; ರಾಜ್ಯ ಸರ್ಕಾರ ವಾರಂತ್ಯ ಕರ್ಫ್ಯೂ ಹೇರಿರುವ ಹಿನ್ನೆಲೆ ಅಣ್ಣಿಗೇರಿಯ ಪಟ್ಟಣದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಪಟ್ಟಣದ ಮಾರ್ಕೆಟ್ ನಲ್ಲಿ ಇರುವ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿದೆ.
ತುತ್ತು ಕಾರ್ಯಚಟುವಟಿಕೆಗಳಿಗೆ ಹೊರತುಪಡಿಸಿ, ಅನಾವಶ್ಯಕ ಜನರ ಓಡಾಟವನ್ನು ಪಟ್ಟಣದಲ್ಲಿ ಪೊಲೀಸರು ಬ್ರೇಕ್ ಹಾಕಿದ್ದಾರೆ. ಮಾರ್ಕೆಟ್ ನಲ್ಲಿ ಅಗತ್ಯವುಳ್ಳ ಅಂಗಡಿಗಳನ್ನು ಹೊರತುಪಡಿಸಿ, ಬೇರೆ ಅಂಗಡಿಗಳಿಗೆ ಬೀಗ ಹಾಕಿರುವ ದೃಶ್ಯಗಳು ಕಂಡು ಬರುತ್ತಿದೆ. ಯಾವಾಗಲೂ ಜನದಟ್ಟನೆ ಇರುತ್ತಿದ್ದ ಮಾರ್ಕೆಟ್ ಇಂದು ವಾರಂತ್ಯ ಕರ್ಫ್ಯೂ ಹಿನ್ನೆಲೆ ಜನರಿಲ್ಲದೆ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು.
Kshetra Samachara
08/01/2022 04:12 pm