ಅಣ್ಣಿಗೇರಿ: ಕೊರೊನಾ ವೈರಸ್‌ನ ರೂಪಾಂತರಿ ಒಮಿಕ್ರಾನ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ನಿನ್ನೆ ನೈಟ್ ಕರ್ಫ್ಯೂ ಎರಡನೇ ದಿನವಾಗಿದ್ದು, ಅಣ್ಣಿಗೇರಿ ಪಟ್ಟಣದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರಾತ್ರಿ 10:00 ಗಂಟೆಯಾಗುತ್ತಿದ್ದಂತೆ,ಶ್ರೀ ಅಮೃತೇಶ್ವರ ದೇವರ ಗುಡಿಯ ಬಯಲು, ಮಾರ್ಕೆಟ್ ರಸ್ತೆ, ಚೆನ್ನಮ್ಮ ವೃತ್ತ, ಹಾಗೂ ಪಟ್ಟಣದಲ್ಲಿನ ಪ್ರಮುಖ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.
Kshetra Samachara
30/12/2021 10:17 am