ಕುಂದಗೋಳ: ಸಾಮಾಜಿಕ ಅಂತರ ಮೀರಿದ ಬ್ಯಾಂಕ್ ಮುಂದೆ ಜನರ ಗುಂಪು

ಕುಂದಗೋಳ : ಈ ಕೊರೊನಾ ವೈರಸ್ ಲಾಕ್ ಡೌನ್ ಟೈಮ್ ಒಳಗೆ ಎಲ್ಲೇಡೆ ಸಾಮಾಜಿಕ ಅಂತರ ಮಾಸ್ಕ್ ಬಳಕೆ ನಿಯಮ ಇದ್ರೂ ಸಹ ಆ ನಿಯಮಗಳು ನಮ್ಮ ಈ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತು ಇಲ್ಲೇನು ? ಎಂಬ ಸಂಶಯ ಸಾರ್ವಜನಿಕರಲ್ಲಿ ಕಂಡು ಬರಾಕತ್ತತಿ ನೋಡ್ರಿ.

ಅವರಿಗೆ ಯಾಕ್ರೀ ಗೊತ್ತಿಲ್ಲ ಅಂತಿರೇನು ? ಇಲ್ನೋಡ್ರೀ ಬ್ಯಾಂಕ್ ಮುಂದೆ ಈ ನಮೂನಿ ಸಾರ್ವಜನಿಕರ ಒಬ್ಬರಿಗೊಬ್ಬರು ತಾಗುವಂಗ ಪಾಳೆ ಹಚ್ಚಿದ್ದ ನೋಡಿದ್ರ ಗೊತ್ತ ಆಗೂದಿಲ್ಲಾ ಕೋವಿಡ್ ಈ ರೂಲ್ಸ್ ಇವ್ರು ಮರ್ತಾರಾ ಅಂತ್ಹೇಳಿ.

ಸರ್ಕಾರ ಬ್ಯಾಂಕ್ ಚಟುವಟಿಕೆ ಮಾಡ್ಕೋಳ್ಳಾಕ್ ಅಗತ್ಯ ಸಮಯ ಕೋಟ್ರು ಜನಾ ಈ ಪಾಟಿ ಸೇರೋದು ಮಾಸ್ಕ್ ಸಾಮಾಜಿಕ ಅಂತರ ಮರೆಯೋದು ಅಂದ್ರ ರೋಗಕ್ಕೆ ಆಹ್ವಾನ ನೀಡಿದ್ಹಂಗ ಅಲ್ವಾ.

ದಯವಿಟ್ಟು ಕೆನರಾ ಬ್ಯಾಂಕ್ ಅಧಿಕಾರಿಗಳೇ ನಿಮ್ಮ ಬ್ಯಾಂಕ್ ಮುಂದೆ ಸಾಮಾಜಿಕ ಅಂತರ ಬಾಕ್ಸ್ ಹಾಕಿ ಜನತೆ ಜೀವ ರಕ್ಷಿಸಿ.

Kshetra Samachara

Kshetra Samachara

6 days ago

Cinque Terre

61.98 K

Cinque Terre

4

 • ALLABAKASHIBALLARE
  ALLABAKASHIBALLARE

  ನಮ್ಮ ಬ್ಯಾಂಕ್ಗಳ ಕೆಲಸ,, ಯಷ್ಟು ಸ್ಪೀಡ್ ಐತಿ ಅಂದ್ರ,,,, ದಿನಕ್ಕೆ 30 ಜನ ಕೆಲಸ ಆಗವಲ್ದು ನೋಡ್ರಿ,,, 7g speed

 • sunil
  sunil

  ಅವ್ನೌನ್ ನಮ್ಮ ಕುಂದಗೋಳ ಸಿಂಡಿಕೇಟ್ ಬ್ಯಾಂಕಿನ ಕೆಲ್ಸ ಆಗಬೇಕು ಅಂದ್ರೆ ಊಟ ಕಟ್ಕೊಂಡು ಹೋಗ್ಬೇಕು ಅಷ್ಟು ಲೇಟ್ ಆಗಿ ಕೆಲಸ ಮಾಡ್ತಾರೆ ಅದರಲ್ಲಿ ಅವರು ನೋಡಿದ್ರೆ 2 ಕ್ಕೆ ಕೆಲ್ಸ ಮುಗಿಸೋಕೆ ಅಂತಾರೆ

 • Yallavva Hadimani
  Yallavva Hadimani

  ಬ್ಯಾಂಕ್ ಅಧಿಕಾರಿಗಳಗಿಂತ ನಮ್ಮ ಆರೋಗ್ಯ ನಾವು ಕಾಯಕೊಬೇಕು

 • ಶ್ರೀ ಗುರು
  ಶ್ರೀ ಗುರು

  ಈಗ ಹೇಳಿ ಯಾವ ಅಂತರ ಸಾಮಾಜಿಕ ಅಂತರ ಸಾಮಾನ್ಯವೇ ಸಾಧ್ಯವೇ ಹಾಗೆ ಸುಮ್ಮನೇನೇ