ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ದ್ವಿಚಕ್ರ ವಾಹನದಲ್ಲಿ ಮಾಸ್ಕ್ ಧರಿಸದೆ ಎರಡು ಜನ ಹೋದ್ರೆ ದಂಡ ಗ್ಯಾರಂಟಿ

ಕುಂದಗೋಳ: ಜನರಲ್ಲಿ ಎಲ್ಲಿಲ್ಲದ ಭಯ ಸೃಷ್ಟಿಸಿ ಸ್ವಚ್ಙತೆಯ ಪಾಠ ಮಾಡಿದ ಕೊರೊನಾ ವೈರಸ್ ಕಡಿಮೆಯಾಗುತ್ತಲಿದ್ದರು, ಅದರ ಮುಂಜಾಗ್ರತೆ ಅರಿವು ಕಡಿಮೆಯಾಗಿಲ್ಲ, ಈ ಪರಿಣಾಮ ಮತ್ತೆ ಕುಂದಗೋಳ ಪಟ್ಟಣದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗ್ರಾಮೀಣ ಪೊಲೀಸರು ದಂಡದ ಮೊತ್ತ ವಿಧಿಸುತ್ತಿದ್ದಾರೆ.

ಹೌದು ! ದ್ವಿಚಕ್ರ ವಾಹನದಲ್ಲಿ ಜನ ಮಾಸ್ಕ್ ಇಲ್ಲದೆ ಎರೆಡು ಸಂಚರಿಸುತ್ತಿದ್ದವರನ್ನ ಮಾತ್ರ ಪೊಲೀಸರು ತಡೆದು ದಂಡ ವಿಧಿಸುತ್ತಿದ್ದಾರೆ, ಆದರೆ ದ್ವಿಚಕ್ರ ವಾಹನದಲ್ಲಿ ಒಬ್ಬರೆ ಮಾಸ್ಕ್ ಇಲ್ಲದೆ ಸಂಚಾರ ಮಾಡಿದ್ರು ದಂಡದ ನಿಯಮ ಅವರಿಗೆ ಅನ್ವಯಿಸುವುದಿಲ್ಲ, ಇದಲ್ಲದೆ ರೈತಾಪಿ ಕೆಲಸ ಕಾರ್ಯಗಳ ನಿಮಿತ್ತ ಮಾಸ್ಕ್ ಇಲ್ಲದ ಓಡಾಡುವ ರೈತರಿಗೆ ಪೊಲೀಸರು ಮಾಸ್ಕ್ ಬಗ್ಗೆ ಅರಿವು ನೀಡಿ ಕಳಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

11/11/2020 04:41 pm

Cinque Terre

46.57 K

Cinque Terre

0

ಸಂಬಂಧಿತ ಸುದ್ದಿ