ಕುಂದಗೋಳ : ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ವಿವಿಧ ಕಾರ್ಯಗಳ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲೇ ಕೋವಿಡ್-19 ಟೆಸ್ಟ್ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರ ಸಂಖ್ಯೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪಹಣಿ ಪತ್ರ ಕೌಂಟರ್ ಹಾಗೂ ಕಂದಾಯ ಪ್ರಮಾಣಪತ್ರ ಕೌಂಟರ್ ಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಕಂಡು ಬರುತ್ತಿದ್ದಾರೆ.
ಗೇಟ್ ಪಕ್ಕದಲ್ಲಿ ಇಲಾಖೆಯ ಸಿಬ್ಬಂದಿ ನಿಂತುಕೊಂಡು ಒಬ್ಬೊಬ್ಬರಂತೆ ತಹಶೀಲ್ದಾರ್ ಕಚೇರಿಯ ಆವರಣದ ಒಳಗಡೆ ಬಿಟ್ಟು ಕೋವಿಡ್ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ. ಆದರೆ ಯುವಕರು, ಮಧ್ಯ ವಯಸ್ಸಿನವರು 'ನಿನ್ನೆ ಮಾಡ್ಸೀನ್ರೀ, ಮೊನ್ನೆ ಮಾಡ್ಸೀನ್ರೀ, ಸರ್ಕಾರಿ ದವಾಖಾನ್ಯಾಗ ಮಾಡ್ಯಾರ' ಎಂದು ಹಾರಿಕೆ ಉತ್ತರ ಹೇಳಿ ಕಚೇರಿಗೆ ಎಂಟ್ರಿಯಾದ್ರೇ ವಯೋವೃದ್ಧರೇ ಹೆಚ್ಚಾಗಿ ಕೋವಿಡ್ ಟೆಸ್ಟ್ ಗೆ ಸಮ್ಮತಿ ನೀಡಿದರು.
Kshetra Samachara
01/10/2020 04:53 pm