ಹುಬ್ಬಳ್ಳಿ: ಧಾರವಾಡದ ಹೊಸ ಯಲ್ಲಾಪುರದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ತಾಯಿಯೊಬ್ಬಳು ತನ್ನ ಕರಳು ಬಳ್ಳಿಯನ್ನು ಉಳಿಸಿಕೊಳ್ಳಲು ಸಹಾಯ ಹಸ್ತ ಬೇಡುತ್ತಿದ್ದಾಳೆ.
ಧಾರವಾಡದ ಹೊಸ ಯಲ್ಲಾಪುರದ ನಿವಾಸಿ ಪ್ರತಿಭಾ ತನ್ನ ಮಗಳು ಪವಿತ್ರಾಳನ್ನು ಉಳಿಸಿಕೊಳ್ಳಲು ಹರಸಾಹಸ ಪಡ್ತಿದ್ದಾಳೆ. ವಿಚಿತ್ರ ಕಾಯಿಲೆಗೆ ತುತ್ತಾಗಿರುವ ಪವಿತ್ರ ಕಳೆದ 6 ವರ್ಷದಿಂದ ಮಲಗಿದ ಸ್ಥಿತಿಯಲ್ಲಿಯೇ ಇದ್ದು ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದುಡ್ಡಿಲ್ಲದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೇಳ್ಬೇಕು ಅಂದ್ರೆ 6 ವರ್ಷ ಆಗುವವರೆಗೂ ಪವಿತ್ರಾ ಆರೋಗ್ಯ ಚೆನ್ನಾಗಿಯೇ ಇತ್ತು. ಆದ್ರೆ ಅದ್ಯಾವ ಕರಿ ನೆರಳು ಈಕೆಯ ಮೇಲೆ ಬಿತ್ತೋ ಗೊತ್ತಿಲ್ಲ, ಒಮ್ಮೆಲೇ ಆರೋಗ್ಯದಲ್ಲಿ ಏರುಪೇರಾಗಿ ಹಾಸಿಗೆ ಹಿಡಿದಿದ್ದಾಳೆ.
ಇನ್ನು ಮಗಳ ಚಿಕಿತ್ಸೆಗೆ ಭರಿಸುವಷ್ಟು ಹಣ, ಆಸ್ತಿ-ಪಾಸ್ತಿ ಯಾವುದು ಇಲ್ಲ. ಮಗಳಿಗೆ ಚಿಕಿತ್ಸೆ ಕೊಡಿಸಲಾಗದಷ್ಟು ನಿಶಕ್ತರಾಗಿದ್ದೇವೆ. ನಮ್ಮ ಮಗಳ ಚಿಕಿತ್ಸೆಗೆ ಅಗತ್ಯವಾಗಿ ದಾನಿಗಳು ನೆರವಾಗುತ್ತಾರೆಂಬ ಏಕೈಕ ಭರವಸೆ ಉಳಿದುಕೊಂಡಿದೆ. ಪುಣ್ಯಾತ್ಮರು ಸಹಾಯಮಾಡುವಂತೆ ಕೇಳಿಕೊಳ್ಳುತ್ತೇನೆ ಅಂತ ತಾಯಿ ಪ್ರತಿಭಾ ಅಂಗಲಾಚುತ್ತಿದ್ದಾರೆ. ಹೃದಯವಂತರು ತಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ. ನೆರವು ನೀಡ ಬಯಸುವ ಮನಸ್ಸುಗಳು ಈ ಖಾತೆಗೆ ಹಣ ಕಳುಹಿಸಬಹುದು
ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ: 520101265967888,
ಖಾತೆದಾರರ ಹೆಸರು: ಪ್ರತಿಭಾ ತೋಪಾಜಿ ದೇವರದವರ
ಐಎಫ್‌ಎಸ್‌ಸಿ: UBIN0900265,
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/09/2022 08:17 pm