ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಂಗಾಂಗ ದಾನ ಮಾಡಿದ ಯುವಕನ ಕುಟುಂಬ: ಝೀರೋ ಟ್ರಾಫಿಕ್‌ನಲ್ಲಿ ಹೃದಯ ರವಾನೆ

ಧಾರವಾಡ: ಮಿದುಳು ನಿಷ್ಕ್ರೀಯಗೊಂಡ ಯುವಕನ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಆತನ ಅಂಗಾಂಗಳು ಇತರರಿಗೆ ಜೀವ ನೀಡಿವೆ.

ಹೌದು! ಕಳೆದ ಕೆಲವು ದಿನಗಳ ಹಿಂದಷ್ಟೇ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಹೃದಯ ಹಾಗೂ ಕಿಡ್ನಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ರವಾನೆಯಾಗಿದ್ದವು. ಈಗ ಅದೇ ರೀತಿ ಮಿದುಳು ನಿಷ್ಕ್ರೀಯಗೊಂಡ 26 ವರ್ಷದ ಯುವಕನ ಅಂಗಾಂಗಗಳನ್ನು ಆತನ ಮನೆಯವರು ದಾನ ಮಾಡಿದ್ದಾರೆ.

ಅಂಗಾಂಗ ದಾನ ಕುರಿತು ವೈದ್ಯರು ಪಾಲಕರ ಮನವೊಲಿಸಿದರು. ಇದರ ಫಲವಾಗಿ ಹೃದಯ, 2 ಮೂತ್ರಪಿಂಡ, ಕಣ್ಣುಗಳು ಹಾಗೂ ಯಕೃತ್ ಆರು ಜನರ ಬದುಕಿಗೆ ಆಸರೆಯಾಗಿವೆ.

ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಯಕೃತ್, ಬೆಂಗಳೂರಿಗೆ ಮೂತ್ರಪಿಂಡ, ಎಸ್‌ಡಿಎಂ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ನಿರೀಕ್ಷೆಯಲ್ಲಿರುವವರಿಗಾಗಿ ನೀಡಲಾಗುತ್ತಿದೆ. ಬೆಳಗಾವಿಗೆ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣವರೆಗೆ ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ಸಾಗಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

11/08/2022 08:06 pm

Cinque Terre

10.67 K

Cinque Terre

1

ಸಂಬಂಧಿತ ಸುದ್ದಿ