ಕುಂದಗೋಳ:ಯೋಗದ ಪ್ರತಿ ಮಜಲನ್ನು ಲೀಲಾಜಾಲವಾಗಿ ಮಾಡುವ ಸಾಧನೆ, ಯೋಗದ ಕ್ರಿಯೆಯಲ್ಲಿ ನ್ಯಾಷನಲ್ ರೆಕಾರ್ಡ್, ಹೊರ ದೇಶಕ್ಕೆ ಯೋಗ ಕಲಿಸಲು ಆಹ್ವಾನವಿದ್ದರೂ ತಾಯ್ನಾಡಿಗೆ ನನ್ನ ಸೇವೆ ಎನ್ನುವ ಈ ಕುವರ ನಿಜಕ್ಕೂ ಗ್ರೇಟ್ !
ಹೌದು ! ಇದು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಯೋಗ ಸಾಧಕ ಪ್ರತೀಕ್ ಗಡಿಗಿಯ ಯಶೋಗಾಥೆ ಇದು, ತನ್ನ ಐದನೇ ವಯಸ್ಸಿನಲ್ಲೇ ಯೋಗಕ್ಕೆ ಆಕರ್ಷಿತನಾದ ಈ ಯುವಕ ಪದವಿ ಹಂತಕ್ಕೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದ ಯೋಗಕ್ಕೆ ಸಿದ್ಧತೆಯಲ್ಲಿದ್ದಾನೆ.
ಇನ್ನೂ ವಿಶೇಷ ಎಂದ್ರೇ ಯೋಗದಲ್ಲಿ ಕಠಿಣ ಎನಿಸುವ ಆಸನ ಮಾಡುವುದೇ ಈತನಿಗೆ ಬಲು ಇಷ್ಟ ಅದರಲ್ಲಿ ಪಶ್ಚಿಮೊತ್ತಾಸನ, ಪೂರ್ಣ ಧನುರಾಸನ, ಶಿರ್ಷಾಸನ, ಹನುಮಾನಾಸನ, ಪದ್ಮಬಕಾಸನ, ಸರ್ವಾಂಗಸನದಲ್ಲಿ ಸೇರಿದಂತೆ ಇತರೆ ಯೋಗದ ಕಲೆಯಲ್ಲಿ ಈತ ಎತ್ತಿದ ಕೈ.
ಅದರಂತೆ ಯೋಗಾಸನದ ಜಲನೀತಿ, ಸೂತ್ರ ನೀತಿ, ಶೀತ ಕರ್ಮ, ವಸ್ತ್ರದೌತಿ ಮಾಡುವುದರಲ್ಲಿ ನಿಪುಣಣಾದ ಈ ಯೋಗ ಪಟು 17 ಸೆಕೆಂಡ್'ಗಳು ಕಾಲ ವಸ್ರ್ತದೌತಿ ಮಾಡಿ ನ್ಯಾಷನಲ್ ರೆಕಾರ್ಡ್ ಮಾಡಿದ್ದಾನೆ.
ರಾಜ್ಯ, ಅಂತಾರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಯೋಗಾಸನದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಈತ ಪಡೆದ ಪ್ರಶಸ್ತಿ, ಪ್ರಮಾಣಪತ್ರ, ಮೆಚ್ಚುಗೆಗಳಿಗೆ ಲೆಕ್ಕವಿಲ್ಲಾ.
ಮುಖ್ಯವಾಗಿ ವಿದೇಶಿಗರೇ ಈತನ ಕಲೆ ಮೆಚ್ಚಿ ಆಹ್ವಾನ ಕೊಟ್ಟರೂ, ತಾಯಿ ನಾಡಲ್ಲೇ ಪ್ರಾಚೀನ ಕಲೆ ಯೋಗದಲ್ಲಿ ಸಾಧನೆಯ ಹಂಬಲ ಹೊಂದಿರುವ ಈ ಯುವಕನ ದೇಶಪ್ರೇಮ, ಯೋಗದ ಕಲೆಗೆ ಒಂದು ಸಲಾಂ ಹೇಳಲೇಬೇಕು.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/06/2022 08:01 pm