ಹುಬ್ಬಳ್ಳಿ: ನಾನು ನನ್ನ ಸಾಧನೆ.. ಪಬ್ಲಿಕ್ ನೆಕ್ಸ್ಟ್ ವಿಶೇಷ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಪ್ರೀತಿಯ ಪಬ್ಲಿಕ್ ನೆಕ್ಸ್ಟ್ ವೀಕ್ಷಕರೇ ತಮ್ಮೆಲ್ಲರಿಗೂ ವಾಣಿಜ್ಯನಗರಿ ಹುಬ್ಬಳ್ಳಿಯ ಸಾಧಕರೊಬ್ಬರನ್ನು ಪರಿಚಯಿಸುವ ಕಾರ್ಯವನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಡುತ್ತಿದೆ. ಹಾಗಿದ್ದರೇ ಯಾರು ಆ ಸಾಧಕರು..? ಅವರ ಸಾಧನೆ ಆದರೂ ಏನು ಅಂತೀರಾ ಇಲ್ಲಿದೆ ನೋಡಿ ಸಾಧಕರ ಸಕ್ಸಸ್ ಸ್ಟೋರಿ...
ಹುಬ್ಬಳ್ಳಿ ಎಂದಾಗ ಎಲ್ಲರ ಮನಸ್ಸಿನಲ್ಲಿ ಮೂಡುವುದು ಕೇವಲ ವಾಣಿಜ್ಯ ಕ್ಷೇತ್ರ ಅಂತ. ಆದರೆ ಹುಬ್ಬಳ್ಳಿಯ ವೈದ್ಯರೊಬ್ಬರು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಜಗತ್ತಿನಾದ್ಯಂತ ಹುಬ್ಬಳ್ಳಿ ಹೆಸರನ್ನು ಅಚ್ಚೊತ್ತುವಂತೆ ಮಾಡಿದ್ದಾರೆ. ಹೌದು.. ಹೀಗೆ ಡೆಂಟಲ್ ಕೇರ್ ಮಾಡುತ್ತಿರುವ ಇವರೇ ಡಾ.ಚಂದ್ರಶೇಖರ ಯಾವಗಲ್. ಜಗತ್ತಿನ ಯಾವ ಮೂಲೆಯಲ್ಲಿ ಆದರೂ ಇವರ ಹೆಸರನ್ನು ಕೇಳಿದರೇ ಸಾಕು ಎಲ್ಲರ ಮನಸ್ಸಿನಲ್ಲಿ ಮೂಡುವ ಚಿತ್ರಣವೇ ದಂತ ಚಿಕಿತ್ಸೆ ಹಾಗೂ ಲೇಸರ್ ಚಿಕಿತ್ಸೆ. ಹೀಗೆ ಸಾಕಷ್ಟು ಹೆಸರು ಮಾಡಿರುವ ಇವರು ನಮ್ಮ ಹುಬ್ಬಳ್ಳಿಯವರೇ ಎಂಬುವುದು ನಮ್ಮ ಹೆಮ್ಮೆ. ಹಾಗಿದ್ದರೇ ಅವರ ಜೀವನದ ದಾರಿ, ಶೈಕ್ಷಣಿಕ ಬದುಕಿನ ಬಗ್ಗೆ ಅವರೇ ಹೇಳ್ತಾರೆ ಕೇಳಿ..
ಇನ್ನೂ ಅಧುನಿಕ ಲೇಸರ್ ತಂತ್ರಜ್ಞಾನದ ಮೂಲಕ ಉತ್ಕೃಷ್ಟ ಗುಣಮಟ್ಟದ ದಂತ ಚಿಕಿತ್ಸೆಗೆ ಹೆಸರಾಗಿರುವ ಡಾ.ಚಂದ್ರಶೇಖರ ಯಾವಗಲ್ ಅವರು ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಗುಣಮಟ್ಟದ ಲೇಸರ್ ದಂತ ಚಿಕಿತ್ಸೆ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಹುಬ್ಬಳ್ಳಿಯ ವೈದ್ಯರ ಕಾರ್ಯವೈಖರಿಯನ್ನು ಕೊಂಡಾಡಿದೆ. ತಮ್ಮ ತಂದೆಯಿಂದಲೇ ಪ್ರೇರಿತರಾದ ಡಾ.ಚಂದ್ರಶೇಖರ ಯಾವಗಲ್ ತಮ್ಮ ಆರ್ಥಿಕ ಸಂಕಷ್ಟದ ಕುಟುಂಬದಲ್ಲಿ ಛಲದಂಕ ಮಲ್ಲನಂತೆ ಕಂಡಿರುವ ಕನಸನ್ನು ನನಸು ಮಾಡುವ ಛಲತೊಟ್ಟು ಈಗ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾರೆ. ಬದುಕಿನ ಕಷ್ಟದ ಜೊತೆಗೆ ಬೆಟ್ಟದ ಕನಸನ್ನು ಸಾಧಿಸಿದ ಬಗ್ಗೆ ಇಲ್ಲಿದೇ ನೋಡಿ ಮನದಾಳದ ಮಾತು...
ಇನ್ನೂ ಕೋವಿಡ್‌ನಲ್ಲಿ ಗುಣಮಟ್ಟದ ಲೇಸರ್ ಚಿಕಿತ್ಸೆ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಪ್ರಶಂಸೆಗೆ ಹುಬ್ಬಳ್ಳಿಯ ಲೇಸರ್ ತಜ್ಞ ಡಾ.ಚಂದ್ರಶೇಖರ ಯಾವಗಲ್ ಪಾತ್ರರಾಗಿದ್ದು, ವೈದ್ಯಕೀಯ ಕ್ಷೇತ್ರದ ಸಾಧನೆ ಹಾಗೂ ಸೇವೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸಿಸಿದೆ. ಹುಬ್ಬಳ್ಳಿಯ ಹೆಸರಾಂತ ದಂತ ವೈದ್ಯ ಮತ್ತು ಓರಲ್-ಕ್ರೇನಿಯೋ ಫೇಶಿಯಲ್ ಲೇಸರ್ ತಜ್ಞ ಡಾ. ಚಂದ್ರಶೇಖರ್ ಯಾವಗಲ್ ಅವರು ಕೋವಿಡ್ ಮತ್ತು ಪೋಸ್ಟ್ ಕೋವಿಡ್ ಮ್ಯೂಕೋರ್ಮೈಕೋಸಿಸ್ ಕುರಿತಾದ ಸೇವೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸಿ ಕೊರೋನಾ ವೈರಸ್ ರೋಗದ ಭೀತಿಯಲ್ಲಿಯೂ ಕರ್ತವ್ಯ ನಿರ್ವಹಿಸಿರುವುದನ್ನು ಕೊಂಡಾಡಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯು ಡಾ.ಯಾವಗಲ್ ಅವರ JOURNAL OF CARDIOVASCULAR RESEARCH IN 2021 ಸಂಶೋಧನಾ ಪ್ರಬಂಧದ ಕುರಿತು ಶ್ಲಾಘಿಸಿದೆ. ಇನ್ನೂ ಡಾ. ಚಂದ್ರಶೇಖರ್ ಯಾವಗಲ್ ಅವರು ಪೋರ್ಟಬಲ್ ಲೇಸರ್ ಸಾಧನದ ಮೂಲ ಆವಿಷ್ಕಾರಕ್ಕಾಗಿ 'ಹೆಲ್ತ್ ಟೆಕ್ ಇನ್ನೋವೇಶನ್ ಅವಾರ್ಡ್ ಆಫ್ 2020' ಮೂಲಕ ಮೊದಲ ಬಾರಿಗೆ ಗುರುತಿಸಲ್ಪಟ್ಟಿದ್ದಾರೆ. ಅಲ್ಲದೆ ಅವರು ಪಾನ್, ಗುಟ್ಕಾ, ತಂಬಾಕು ಸೇವಿಸುವವರಲ್ಲಿ ಬಾಯಿಯ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ನೋವುರಹಿತ, ರಕ್ತರಹಿತ, 5 ನಿಮಿಷದಲ್ಲಿಯೇ ನೀಲಿ ಡಯೋಡ್ ಸ್ಕ್ಯಾನ್‌ನಲ್ಲಿ ರೋಗ ಪತ್ತೆ ಮಾಡುವ ಕಾರ್ಯದ ಮೂಲಕ ಜನಮನ್ನಣೆ ಪಡೆದ ವೈದ್ಯರಾಗಿದ್ದಾರೆ. ಅಲ್ಲದೇ ಲೇಸರ್ ತಜ್ಞ ಡಾ.ಚಂದ್ರಶೇಖರ ಯಾವಗಲ್ ಅವರು ಯಾವಗಲ್ ಹೆಲ್ತ್‌ಕೇರ್ ಫೌಂಡೇಶನ್‌ನ ಲೇಸರ್ವೇದ ಸೆಂಟರ್‌ನಲ್ಲಿ ತಮ್ಮ ವೃತ್ತಿಯನ್ನು ಮುನ್ನಡೆಸುತ್ತಿದ್ದಾರೆ.
ಇನ್ನೂ ಶಸ್ತ್ರಚಿಕಿತ್ಸೆ ಅಂದರೆ ರಕ್ತ ಹೋಗುತ್ತದೆ. ಸಾಕಷ್ಟು ನೋವಾಗುತ್ತದೆ ಎಂಬುವಂತ ಜನರ ಆತಂಕವನ್ನು ದೂರ ಮಾಡಿ. ಅಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ಮಾಡುತ್ತಿದ್ದಾರೆ. ಅಲ್ಲದೇ ತಾವೇ ಸ್ವತಃ ಚಿಕಿತ್ಸೆಗಾಗಿ ಉಪಕರಣವೊಂದನ್ನು ಕಂಡು ಹಿಡಿದಿದ್ದಾರೆ. ಆ ಉಪಕರಣದ ಬಗ್ಗೆ ವೈದ್ಯರ ಮಾತನ್ನೊಮ್ಮೆ ಕೇಳಿ...
ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯು ಹುಬ್ಬಳ್ಳಿಯ ವೈದ್ಯರ ಸಾಧನೆಯನ್ನು ಗುರುತಿಸಿರುವುದು ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಸಾಕಷ್ಟು ಪುರಸ್ಕಾರಗಳೇ ಹುಬ್ಬಳ್ಳಿಯ ವೈದ್ಯರಾದ ಡಾ.ಚಂದ್ರಶೇಖರ ಯಾವಗಲ್ ಅವರಿಗೆ ಹರಿದು ಬಂದಿರುವುದು ವಾಣಿಜ್ಯನಗರಿ ಕೀರ್ತಿ ಇಮ್ಮಡಿಗೊಳಿಸಿದೆ. ಅಲ್ಲದೆ ಜರ್ಮನ್ ದೇಶದ ಇಂಟರ್ನ್ಯಾಷನಲ್ ಕಾಲೇಜು ಫಾರ್ ಲೈಟ್ ಮೆಡಿಸಿನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಭಾರತೀಯ ಇತಿಹಾಸದಲ್ಲಿಯೇ ಮೊದಲ ವೈದ್ಯರು ಎಂಬುವಂತ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರ ಪುರಸ್ಕಾರದ ನಾವಷ್ಟೇ ಹೇಳಿದರೇ ಹೇಗೆ ಅವರ ಬಾಯಿಂದ ಆ ಮಾತನ್ನೊಮ್ಮೆ ಕೇಳಿ..
ಒಟ್ಟಿನಲ್ಲಿ ಸಾಕಷ್ಟು ಸಾಧನೆಯ ಶಿಖರವನ್ನು ನಿರ್ಮಾಣ ಮಾಡಿರುವ ಡಾ.ಚಂದ್ರಶೇಖರ ಯಾವಗಲ್ ಅವರಿಗೆ ವಿದೇಶಗಳಿಂದ ಸಾಕಷ್ಟು ಬೇಡಿಕೆ ಬಂದರೂ ತಾಯಿನಾಡಿಗಾಗಿ ಇಲ್ಲಿಯೇ ಸೇವೆ ಮಾಡುವ ತುಡಿತವನ್ನು ಹೊಂದಿರುವ ವೈದ್ಯರಿಗೆ ನಮ್ಮದೊಂದು ಸಲಾಂ. ವೈದ್ಯರ ಕೀರ್ತಿ ಮತ್ತಷ್ಟು ವ್ಯಾಪಿಸುವ ಮೂಲಕ ಭಾರತದ ಪ್ರತಿಯೊಂದು ರಾಜ್ಯದ ಜನರಿಗೆ ಡಾ.ಚಂದ್ರಶೇಖರ ಯಾವಗಲ್ ಅವರ ಸೇವೆ ದೊರೆಯಲಿ ಎಂಬುವುದು ನಮ್ಮ ಆಶಯ...
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/03/2022 11:52 am