ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಯೋಗಾಸನದ ಪ್ರತಿಭೆ ಹೊತ್ತ ಹಳ್ಳಿ ಯುವಕನಿಗೆ ಬೇಕಿದೆ ಹೊಸ ವೇದಿಕೆ

ವರದಿ: ಶ್ರೀಧರ್ ಪೂಜಾರ

ಪಬ್ಲಿಕ್ ನೆಕ್ಸ್ಟ್‌,ಕುಂದಗೋಳ

ಕುಂದಗೋಳ : ಭಾರತೀಯ ಪ್ರಾಚೀನ ಕಲೆ ಯೋಗಕ್ಕೆಂದು ಇತಿಹಾಸವಿದೆ, ಆಧುನಿಕತೆ ಬೆಳೆದಂತೆಲ್ಲಾ ಯೋಗ ತನ್ನದೇ ಛಾಪು ಮೂಡಿಸುತ್ತಾ, ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟ ಸೇರಿದಂತೆ ವಿದೇಶಗಳಲ್ಲೂ ಭಾರತದ ಯೋಗಕ್ಕೆ ಒಂದು ವೇದಿಕೆಯಿದೆ.

ಅಂತಹ ಯೋಗದಲ್ಲೇ ಏನಾದ್ರೂ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಾ, ಇಲ್ಲೋಬ್ಬ ಹಳ್ಳಿ ಹೈದ ತನ್ನಲ್ಲಿನ ಯೋಗದ ಕಲೆಯ ಮೂಲಕ ಅವಕಾಶಗಳ ಬಾಗಿಲು ತಟ್ಟುತ್ತಾ ಯೋಗ ಉಳಿಸುವದರ ಜೊತೆ ಬೆಳೆಸುವುದಕ್ಕೂ ಸಿದ್ಧನಾಗಿ ಯೋಗ ಕಲಿಯುತ್ತೇನೆ ಎಂದವರಿಗೆ ಅವರವರ ಮನೆವರೆಗೂ ಹೋಗಿ ಯೋಗ ಪಾಠ ಮಾಡಲು ತಯಾರಿದ್ದಾನೆ.

ಈತನ ಹೆಸರು ಮಂಜುನಾಥ ಅಣ್ಣಿಗೇರಿ ಮೂಲತಃ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ 24 ವರ್ಷದ ಈ ಯುವಕ ಎಮ್.ಎಸ್ಸಿ‌ ಯೋಗಾ ಸೈನ್ಸ್ ಮುಗಿಸಿ ಈಗಾಗಲೇ ಹಲವಾರು ಯೋಗ ಶಿಬಿರ ಕಾರ್ಯಕ್ರಮ ನಡೆಸಿಕೊಟ್ಟು ಆಸಕ್ತ ಶಾಲಾ, ಪ್ರೌಢಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡುತ್ತಿದ್ದಾರೆ.

ಯೋಗಾಸನದ ವಿವಿಧ ಭಂಗಿಗಳನ್ನು ಅತಿ ಲೀಲಾಜಾಲವಾಗಿ ಮಾಡುವ ಇವರು ಪವನ ಮುಕ್ತಾಸನ, ಶಿರ್ಷಾಸನ, ಮಯೂರಾಸಣ, ಉಷ್ಟ್ರಾಸನ, ಧನುರಾಸನ, ವಜ್ರಾಸನದ ಜೊತೆಗೆ ಯೋಗಾಸನದ ಕ್ರಿಯಾಸನಗಳಾದ ಜನನೀತಿ, ಕಪಾಳಬಾತಿ, ವಸ್ತ್ರನೀತಿ, ಸೂತ್ರ ನೀತಿ, ಪ್ರಾಣಾಯಾಮಗಳನ್ನು ಅತಿ ವಿಶೇಷ ಎಂಬಂತೆ ಮಾಡುತ್ತಾರೆ.

ಈಗಾಗಲೇ ಯೋಗಾಸನ ಮೂಲಕ ಕುಂದಗೋಳ ತಾಲೂಕಿನಾದ್ಯಂತ ಹೆಸರಾಗಿರುವ ಮಂಜುನಾಥ ಅಣ್ಣಿಗೇರಿ ಹೊಸ ಹೊಸ ಅವಕಾಶ ಅರಸುತ್ತಾ ಯೋಗದಲ್ಲೇ ಏನಾದ್ರೂ ಸಾಧನೆ ಮಾಡಬೇಕೆಂಬ ಆಸೆ ಹೊಂದಿದ್ದಾನೆ. ಯೋಗ ಶಿಬಿರ ನಡೆಸುವವರು, ಯೋಗ ಕಲಿಯಬೇಕೆಂಬ ಆಸಕ್ತರು ಮಂಜುನಾಥನಿಗೆ ಕರೆ ಮಾಡಿ ಹೊಸ ವೇದಿಕೆ ನೀಡಬಹುದು ಮಂಜುನಾಥ ಅಣ್ಣಿಗೇರಿ ಸಂಪರ್ಕ ಮಾಡಲು 9739674091 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿರಿ.

Edited By : Manjunath H D
Kshetra Samachara

Kshetra Samachara

28/11/2021 11:00 am

Cinque Terre

89.84 K

Cinque Terre

3

ಸಂಬಂಧಿತ ಸುದ್ದಿ