ಧಾರವಾಡ: ಏರ್ ಗನ್ ಬುಲೆಟ್‌ನಿಂದ ತೀವ್ರವಾಗಿ ಗಾಯಗೊಂಡಿದ್ದ ಕೋತಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುರುವಾರ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಧಾರವಾಡದ ಸೋಮಶೇಖರ್ ಎಂಬುವರಿಗೆ ರಸ್ತೆ ಬದಿ ತೀವ್ರವಾಗಿ ಗಾಯಗೊಂಡಿದ್ದ ಕೋತಿ ಕಂಡಿದೆ. ಅಪಘಾತದಿಂದ ಗಾಯಗೊಂಡಿರಬೇಕು ಅಂದುಕೊಂಡು ಚಿಕಿತ್ಸೆಗಾಗಿ ಕೃಷಿ ವಿವಿಯ ಪಶು ಚಿಕಿತ್ಸಾಲಯಕ್ಕೆ ತಂದಿದ್ದಾರೆ. ವೈದ್ಯ ಡಾ.ಅನಿಲಕುಮಾರ ಪಾಟೀಲ ಪರಿಶೀಲಿಸಿದಾಗ, ಬುಲೆಟ್‌ನಿಂದ ಆಗಿರುವ ಗಾಯಗಳು ಕಂಡಿವೆ. ಕೂಡಲೇ ಎಕ್ಸರೇ ಮೂಲಕ ಪರಿಶೀಲಿಸಿದಾಗ ಕೋತಿಯಲ್ಲಿ ಏರ್ ಗನ್‌ನ ಮೂರು ಬುಲೆಟ್‌ಗಳು ಇರುವುದು ಪತ್ತೆಯಾಗಿದೆ. ಸದ್ಯ ಬುಲೆಟ್ ಕೋತಿಯ ದೇಹದಿಂದ ಹೊರತೆಗೆದಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಅರಣ್ಯ ಇಲಾಖೆಗೆ ಕೋತಿಯನ್ನು ಹಸ್ತಾಂತರಿಸಲಾಗಿದೆ.
Kshetra Samachara
07/10/2021 10:51 pm