ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕೊರೊನಾಕೆ ಮದ್ದು ಕೊಟ್ಟು ಐದನೇ ದಿನದ ವಿಸರ್ಜನೆಗೆ ಸಜ್ಜಾದ ಗಜಮುಖ

ಕುಂದಗೋಳ : ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಬಂದು ಸಂಶಿ ಗ್ರಾಮದಲ್ಲಿ ಭಗತಸಿಂಗ್ ಗರಡಿಮನೆ ಯುವಕ ಮಂಡಳದಿಂದ ಪ್ರತಿಷ್ಠಾಪನೆ ಮಾಡಲ್ಪಟ್ಟ ಗಣೇಶ ಕೊರೊನಾ ಮದ್ದು ಕೊಟ್ಟು ಐದನೇ ದಿನದ ವಿಸರ್ಜನೆಗೆ ಸಜ್ಜಾಗಿದ್ದಾನೆ.

ಇದೇನು ಗಣೇಶ ಕೊರೊನಾ ವೈರಸ್'ಗೆ ಮದ್ದು ಕೊಡೋದಾ ? ಎಂದು ಆಶ್ಚರ್ಯ ಪಡಬೇಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ದೇಶನದಂತೆ ಭಗತಸಿಂಗ್ ಯುವಕ ಮಂಡಳದಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ಮಂಟದಲ್ಲಿ ಇಂದು ಸಾರ್ವತ್ರಿಕ ಕೊರೊನಾ ಲಸಿಕಾ ಅಭಿಯಾನ ಕೈಗೊಂಡು ಸ್ಥಳೀಯರಿಗೆ ಲಸಿಕೆ ಹಾಕುವ ಕಾರ್ಯಕ್ರಮದ ನಡೆದಿದ್ದು ಆ ಮೂಲಕ ಗಣೇಶ್ ಕೊರೊನಾಕೆ ತನ್ನ ಸನ್ನಿಧಿಯಲ್ಲಿ ಜನರಿಗೆ ಕೊರೊನಾ ಲಸಿಕಾ ಮುದ್ದು ನೀಡಿದ್ದಾನೆ.

ಸಂಶಿ ಗ್ರಾಮದ ಗರಡಿಮನೆ ಹಾಗೂ ಭಗತ್'ಸಿಂಗ್ ಯುವಕ ಮಂಡಳದವರು ಈ ಬಾರಿ ಸರಳ ಆಚರಣೆ ಜೊತೆ ಲಸಿಕಾ ಅಭಿಯಾನ ಕೈಗೊಂಡು ಮನೆ ಮನೆಗೆ ತೆರಳಿ ಜನರಿಗೆ ತಿಳುವಳಿಕೆ ನೀಡಿ ಲಸಿಕೆ ಹಾಕಿಸುತ್ತಾ ಗಣೇಶ್ ಚತುರ್ಥಿ ಜೊತೆ ಕೊರೊನಾ ಹತೋಟಿಗೂ ಕೈ ಜೋಡಿಸಿ ಸ್ಥಳೀಯರಿಂದ ಸೈ ಎನಿಸಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

14/09/2021 08:02 pm

Cinque Terre

52.05 K

Cinque Terre

1

ಸಂಬಂಧಿತ ಸುದ್ದಿ